ದೇವಸಮುದ್ರ ಭಾಗದಲ್ಲಿ ಮೆಣಸಿನಕಾಯಿ ಬೆಳೆ ಕೊಳೆತಿರುವುದು. 
ಬಳ್ಳಾರಿ

ಎಲ್ ನಿನೋಗೆ ಮೆಣಸಿನಕಾಯಿ ಬೆಳೆ ಕುಂಠಿತ

ಪ್ರಮುಖ ಮುಖ್ಯಾಂಶಗಳು

  • ಕೆಂಪು
  • ಮೆಣಸಿನಕಾಯಿ
  • ಬೆಳೆ
ಕಂಪ್ಲಿ: ಎಲ್ ನಿನೋದಿಂದ ದೇವಸಮುದ್ರ ಭಾಗದಲ್ಲಿ ಬೆಳೆಯಲಾದ ಮೆಣಸಿನಕಾಯಿ ಬೆಳವಣಿಗೆ ಕುಂಠಿತಗೊಂಡಿದೆ. ರೈತರು ಮುಂಜಾಗ್ರತಾ ಕ್ರಮ ಅನುಸರಿಸುವಂತೆ ತೋಟಗಾರಿಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ತಾಲೂಕಿನ 615ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮತ್ತು ಕೆಂಪು ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಹನಿ ನೀರಾವರಿ ಪದ್ಧತಿಯಲ್ಲಿ ನಿರಂತರ ನೀರು ಪೂರೈಕೆಯಿಂದ, ಬಿಸಿಲಿನ ಕೊರತೆಯಿಂದ ನೀರು ಹೆಚ್ಚಾಗಿ ಸಸಿ ಕೊಳೆತಿವೆ.
ವೈಜ್ಞಾನಿಕ ವಿಧಾನದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ಮಲ್ಚಿಂಗ್, ಒಣಕಸ (ಸಾವಯವ) ಹೊದಿಕೆಯ ಮಲ್ಚಿಂಗ್ ಅಳವಡಿಕೆಯಿಂದ ಭೂಮಿಯ ತೇವಾಂಶ ಕಾಪಾಡಿಕೊಳ್ಳಬಹುದು. ಇದರಿಂದ ಕಡಿಮೆ ನೀರಿನ ಬಳಕೆ ಸಾಧ್ಯವಾಗುತ್ತದೆ. ಕಾರ್ಬೆಂಡಜಿಮ್ ಶೇ.12 ಮತ್ತು ಮ್ಯಾಂಕೊಜೆಮ್ ಶಿಲೀಂದ್ರನಾಶಕವನ್ನು ಬಳಸುವಂತೆ ರೈತರಿಗೆ ಸಲಹೆ ನೀಡಿದೆ.
ಬೆಳೆ ವಿಮೆ ಮಾಡಿಸಲು ಹಾಗೂ ಪರ್ಯಾಯ ಬೆಳೆಗಳ ಬಿತ್ತನೆ ಕುರಿತು ಮಾಹಿತಿ ನೀಡಲಾಗಿದೆ ಎಂದು ತೋಟಗಾರಿಕೆ ಸಹಾಯಕ ಇಲಾಖೆ ನಿರ್ದೇಶಕ ಎಸ್.ಚೇತನ್‌ಕುಮಾರ್ ನಾಯಕ್ ತಿಳಿಸಿದ್ದಾರೆ.