ಮಾನ್ವಿ: ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿ 80ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ಸಣ್ಣ ನೀರಾವರಿ ಇಲಾಖೆ ಅವೈಜ್ಞಾನಿಕ ಮತ್ತು ಕಳಪೆಯಿಂದ ಕೈಗೊಂಡ ಹಿನ್ನೆಲೆಯಲ್ಲಿ ಜೂ.22ರಂದು ತಾಪಂ ಅವರಣದಲ್ಲಿ ಧರಣಿ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಅಧ್ಯಕ್ಷ ಬಸವರಾಜ ನಕ್ಕುಂದಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂತರ್ಜಲ ವೃದ್ಧಿಸಲು ಮತ್ತು ಜಮೀನುಗಳಿಗೆ ನೀರೊದಗಿಸುವುದಕ್ಕೆ ಅಗತ್ಯ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಳ್ಳಗಳು, ನಾಲೆಗಳು, ಗುಡ್ಡಗಾಡು ಪ್ರದೇಶದ ಚೆಕ್ ಡ್ಯಾಂ ನಿರ್ಮಾಣ ಮಾಡುವ ಕಾಮಗಾರಿ ಕೈಗೊಂಡಿದೆ.
ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ದಲಿತರ ಜಮೀನುಗಳಿಗೆ ನೀರವಾರಿ ಕಲ್ಪಿಸಲಾಗುತ್ತಿಲ್ಲ ಎಂದು ಆರೋಪಿಸಿದರು. ಕಾರ್ಮಿಕ ಸಂಘದ ಅಧ್ಯಕ್ಷ ಪರಶುರಾಮ್ ಬಾಗಲವಾಡ, ದಲಿತ ಚಳವಳಿ ತಾಲೂಕು ಅಧ್ಯಕ್ಷ ಚಂದ್ರಶೇಖರ, ದಲಿತ ಸಮರ ಸೇನೆ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ, ನರಸರೆಡ್ಡಿ, ಪ್ರಶಾಂತ ಜಾಗೀರಪನ್ನೂರ್, ವೆಂಕಟೇಶ, ಅಮರೇಶ ಜಾಗೀರಪನ್ನೂರು ಇತರರಿದ್ದರು.