ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ಉಪಾಧ್ಯಕ್ಷ ಸೂಳ್ಳಪ್ಪರ ರಾಮಣ್ಣ, ನಿರ್ದೇಶಕರಾದ ಬಸವರಾಜ್ ಹಂಪಾಪಟ್ಟಣ, ಮೋದಿನ್‌ಸಾಬ್, ಎಚ್.ರಾಮಪ್ಪ, ಓಮೇಶ, ಎಂ.ಕೆ.ಶಾಂತಪ್ಪ, ಕನ್ನಿಹಳ್ಳಿ ಟಿ.ಜಗದೀಶ, ಪ್ರಕಾಶ್ ದಾಸರ, ಸಿ.ಭರತ್, ನಾಗಮ್ಮ, ಶಕುಂತಲಮ್ಮ ಇತರರಿದ್ದರು. 
ಬಳ್ಳಾರಿ

ಉಲವತ್ತಿ ಸಹಕಾರಿಗೆ ಚಂದ್ರಶೇಖರ್ ಅಧ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಚುನಾವಣೆ ಅಧಿಕಾರಿ ಲೀಲಾವತಿ ಹೇಳಿಕೆ
  • ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ಉಲವತ್ತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಕನ್ನಿಹಳ್ಳಿ ಚಂದ್ರಶೇಖರ್, ಉಪಾಧ್ಯಕ್ಷ ಸ್ಥಾನಕ್ಕೆ ಸೂಳ್ಳಪ್ಪರ್ ರಾಮಪ್ಪ ಅವಿರೋಧ ಆಯ್ಕೆಯಾದರು.

9 ಹಳ್ಳಿಗಳ ವ್ಯಾಪ್ತಿಯ ಸಂಘ 12 ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದು, 11ಸ್ಥಾನ ಸಾಲಗಾರರ ಕ್ಷೇತ್ರ, ಒಂದು ಸ್ಥಾನ ಸಾಲಗಾರರಲ್ಲದ ಕ್ಷೇತ್ರವಿದ್ದು, ಉಲವತ್ತಿ, ಕನ್ನಿಹಳ್ಳಿ ಹಾಗೂ ಹರೇಗೊಂಡನಹಳ್ಳಿ ಸೇರಿ 5 ಸ್ಥಾನ ಸಾಮಾನ್ಯ, ಒಂದು ಪರಿಶಿಷ್ಟ ಜಾತಿ, ಒಂದು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ ಹಾಗೂ ಎರಡು ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲ ಸ್ಥಾನಕ್ಕೆ ಅವಿರೋಧ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ಲೀಲಾವತಿ ಹೇಳಿದರು.
ಪ್ರಮುಖರಾದ ದಾಸರ ನಾಗರಾಜ, ಬುಳ್ಳಪ್ಪ, ಮೋದೀನ್ ಸಾಬ್, ಎಚ್.ಓಮೇಶ, ಕನ್ನಿಹಳ್ಳಿ ಕೊಟ್ರೇಶ, ಜಿ.ಪಕ್ಕೀರಜ್ಜ, ಪ್ರಶಾಂತ, ಜಯಪ್ಪ, ವೆಂಕಟಣ್ಣ, ಹುಡೇದ್ ಹುಲುಗಪ್ಪ, ಸೋಮನಗೌಡ ಪಾಟೀಲ್, ಮುತ್ಕೂರು ಸುಭಾಷ್, ಶಿವಶಂಕರಯ್ಯ, ಭರಮಜ್ಜ ಇತರರಿದ್ದರು.