ಹಗರಿಬೊಮ್ಮನಹಳ್ಳಿ ಉಪತಹಸೀಲ್ದಾರ್ ಶಿವಕುಮಾರಗೌಡಗೆ ಸಕ್ರಿಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನಗೌಡ, ಪ್ರಮುಖರಾದ ಎಚ್.ಮಂಜುನಾಥ, ಕರಿಬಸಪ್ಪ ಇತರರಿದ್ದರು. 
ಬಳ್ಳಾರಿ

ಸೊನ್ನ ಗ್ರಾಪಂಗೆ ಸೇರಿಸದಿದ್ದರೆ ಜನಗಣತಿ ಬಹಿಷ್ಕಾರ

ಪ್ರಮುಖ ಮುಖ್ಯಾಂಶಗಳು

  • ಜನಗಣತಿ

ಸೊನ್ನ ಗ್ರಾಪಂಗೆ ಸೇರಿಸದಿದ್ದರೆ ಜನಗಣತಿ ಬಹಿಷ್ಕಾರ

ಹಗರಿಬೊಮ್ಮನಹಳ್ಳಿ: ಗ್ರಾಮಸ್ಥರ ಬೇಡಿಕೆ ಈಡೇರಿಸುವವರೆಗೂ ಜನಗಣತಿ ಬಹಿಷ್ಕರಿಸುತ್ತೇವೆ ಎಂದು ಸಕ್ರಿಹಳ್ಳಿ ಗ್ರಾಮಸ್ಥರು ಉಪತಹಸಿಲ್ದಾರ್ ಶಿವಕುಮಾರಗೌಡಗೆ ಮಂಗಳವಾರ ಮನವಿ ಸಲ್ಲಿಸಿ ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ಜಿ.ಮಲ್ಲಿಕಾರ್ಜುನ ಮಾತನಾಡಿ, ಸಕ್ರಿಹಳ್ಳಿ ಗ್ರಾಮವನ್ನು ದಾಖಲೆಯಲ್ಲಿ ಮಾತ್ರ ಇರುವ ಅಡವಿ ಕ್ಯಾದಿಗೆಹಳ್ಳಿಗೆ ಸೇರಿಸಲಾಗಿದೆ. ಇದರಿಂದ ಸಕ್ರಿಹಳ್ಳಿ ಗ್ರಾಮಸ್ಥರಿಗೆ ಅನ್ಯಾಯವಾಗುತ್ತಿದೆ.
ಅಡವಿ ಕ್ಯಾದಿಗೆಹಳ್ಳಿ ಗ್ರಾಮ ಮೋರಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಸಕ್ರಿಹಳ್ಳಿ ಗ್ರಾಮ ಸೊನ್ನ ಗ್ರಾಪಂ ವ್ಯಾಪ್ತಿಗೆ ಬರುತ್ತದೆ.
ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿದ ಸ್ಥಾನಗಳು ಮೋರಿಗೇರಿ ಗ್ರಾಪಂನಲ್ಲಿವೆ. ಆದರೆ, ಸಕ್ರಿಹಳ್ಳಿ ಗ್ರಾಮದ ಮತದಾರರ ಪಟ್ಟಿ ಸೊನ್ನ ಗ್ರಾಪಂನಲ್ಲಿದೆ. ಚುನಾವಣಾ ವೇಳೆ ಗ್ರಾಪಂಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.
ಈ ಅನ್ಯಾಯವನ್ನು ಸರಿಪಡಿಸಿ, ಸಕ್ರಿಹಳ್ಳಿ ಗ್ರಾಮದ ಜನಸಂಖ್ಯೆ ಪಟ್ಟಿಯನ್ನು ಸೊನ್ನ ಗ್ರಾಪಂಗೆ ಸೇರಿಸುವವರೆಗೂ ಜನಗಣತಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಈ ಕುರಿತು ಈಗಾಗಲೇ ಮನವಿ ಸಲ್ಲಿಸಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಸಮಸ್ಯೆ ಪರಿಹಾರ ಆಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದರು.
ಪ್ರಮುಖರಾದ ಎಚ್.ಮಂಜುನಾಥ, ಜಿ.ಪ್ರಕಾಶ್, ಎ.ಕರಿಬಸಪ್ಪ, ಬಸವರಾಜ್, ಕೆ.ಮಂಜುನಾಥ ಇತರರಿದ್ದರು.