ಕಂಪ್ಲಿ ಪೊಲೀಸ್ ಠಾಣೆಯಲ್ಲಿ ನಡೆದ ಬಕ್ರೀದ್ ಶಾಂತಿಸಭೆಯಲ್ಲಿ ಡಿವೈಎಸ್‌ಪಿ ಪ್ರಸಾದ್ ಕೆ.ಗೋಖಲೆ ಮಾತನಾಡಿದರು. ಪಿಐ ಕೆ.ಬಿ.ವಾಸುಕುಮಾರ್ ಇದ್ದರು.
- ಡಿವೈಎಸ್‌ಪಿ ಪ್ರಸಾದ್ ಕೆ.ಗೋಖಲೆ ಹೇಳಿಕೆ
- ಬಕ್ರೀದ್ ಶಾಂತಿ ಸಭೆ
ಕಂಪ್ಲಿ: ಬಕ್ರೀದ್ ಹಬ್ಬದ ನೆಪದಲ್ಲಿ ಪ್ರಾಣಿ ಹಿಂಸೆ ಮಾಡಬಾರದು ಎಂದು ತೋರಣಗಲ್ ಡಿವೈಎಸ್‌ಪಿ ಪ್ರಸಾದ್ ಕೆ.ಗೋಖಲೆ ಹೇಳಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ಆಚರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಬಕ್ರೀದ್ ಶಾಂತಿ ಸಭೆಯಲ್ಲಿ ಮಾತನಾಡಿದರು. ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಬೇಕು. ಯಾವುದೇ ಗಲಭೆಗೆ ಅವಕಾಶ ನೀಡಬಾರದು. ಯುವಕರು ಮುಂಗೋಪದಿಂದ ವರ್ತಿಸದಂತೆ ಹಿರಿಯರು ತಿಳಿಸಬೇಕು. ಸರ್ವ ಸಮುದಾಯದವರು ಒಗ್ಗೂಡಿ ಸೌಹಾರ್ಧ, ಭಾವೈಕ್ಯ, ಸಹೋದರ ಭಾವನೆಯಿಂದ ಹಬ್ಬ ಆಚರಿಸಬೇಕು ಎಂದರು.
ಪಿಐ ಕೆ.ಬಿ.ವಾಸುಕುಮಾರ್, ಎಎಸ್‌ಐ ಬಸವರಾಜ, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಕೆ.ಮಸ್ತಾನ್‌ಸಾಬ್, ಎಂ.ಬಾಬುಸಾಬ್, ಬಿ.ಜಾಫರ್, ಕೆ.ಮೆಹಬೂಬ್, ಎಂ.ಉಸ್ಮಾನ್, ಬಿ.ಲಿಂಗಪ್ಪ, ನವಾಬ್, ಆಲಂ, ಜಹೀರುದ್ದೀನ್, ಅತಾವುಲ್ಲಾ ರೆಹಮಾನ್ ಇತರರಿದ್ದರು.