ನಾಗೇಂದ್ರ ಅಪ್ತರ ಮನೆ ಮೇಲೆ ಸಿಬಿಐ ದಾಳಿ
ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅಪ್ತರ ಇಬ್ಬರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು.
ಇಲ್ಲಿನ ಹುಸೇನ್‌ನಗರದಲ್ಲಿರುವ ಮಾರುತಿ ಹಾಗೂ ತೇರು ಬೀದಿಯಲ್ಲಿರುವ ವಿಶ್ವನಾಥ ಮನೆಗಳಲ್ಲಿ ಅಧಿಕಾರಿಗಳು ಶೋಧ ನಡೆಸಿ, ಕೆಲವೊಂದು ಮಾಹಿತಿ ಸಂಗ್ರಹಿಸಿದರು. ಇಬ್ಬರನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಿದರು. ಮಾರುತಿ ಎಂಬುವವ ನಾಗೇಂದ್ರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ವಿಶ್ವನಾಥ ಶಾಸಕರಿಗೆ ಸಂಬಂಧಿಸಿಂದ ಕೆಲ ಖಾತೆಗಳನ್ನು ನೋಡಿಕೊಳ್ಳುತ್ತಿದ್ದರು.
ಕಳೆದ ಕೆಲ ತಿಂಗಳ ಹಿಂದೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದರಾಜುಲು ಹಾಗೂ ಶಾಸಕ ಬಿ.ನಾಗೇಂದ್ರ ಅವರ ನಡುವೆ ಮನೆ ಖರೀದಿಗೆ ಸಂಬಂಧಿಸಿದಂತೆ ವ್ಯವಹಾರ ನಡೆದಿದ್ದರಿಂದ ಸಿಬಿಐ ದಾಳಿ ನಡೆದಿತ್ತು. ರಾಜ್ಯ ಸರ್ಕಾರದ 2026ರ ಸಂಪುಟ ಪುನಾರಚನೆ ವೇಳೆ ಶಾಸಕ ನಾಗೇಂದ್ರ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆಯಲಿದ್ದರು. ಈ ದಾಳಿಯಿಂದ ಮತ್ತೆ ಚಿವ ಸ್ಥಾನ ಮುಂದೂಡಬಹುದು ಎನ್ನಲಾಗಿದೆ.