ಬಳ್ಳಾರಿ : ಇಲ್ಲಿನ ಎಸ್ಪಿ ವೃತ್ತದಲ್ಲಿನ ತಾಪಂ ಕಚೇರಿಯ ವಸತಿ ಗೃಹದ ಬಾಗಿಲು ಮುರಿದು 1.16 ಲಕ್ಷ ರೂ. ಮೌಲ್ಯದ ಬಂಗಾರ ಹಾಗೂ ನಗದು ಕಳವುಯಾಗಿರುವ ಘಟನೆ ನಡೆದಿದೆ.
ಮನೆಯ ಬಾಗಿಲಿಗೆ ಹಾಕಿದ್ದ ಬೀಗದ ಪತ್ತಕ್ಕೆ ಕಳ್ಳರು ನಕಲಿ ಬೀಗ ಉಪಯೋಗಿಸಿ, ಒಳಗೆ ನುಗ್ಗಿ ಬೆಡ್‌ರೂಮ್‌ನಲ್ಲಿದ್ದ ಬೀರುವ ಲಾಕರ್ ಮುರಿದು 18 ಸಾವಿರ ರೂ. ಮೌಲ್ಯದ 4 ಗ್ರಾಂ ಚಿನ್ನದ ಉಂಗುರ, 98 ಸಾವಿರ ರೂ. ಮೌಲ್ಯದ ನಗದು ಕಳವು ಮಾಡಿದ್ದು, ಒಟ್ಟು ಮೌಲ್ಯ 1.16 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.