ಅಣ್ಣಗೇರಿ ವೀರಪ್ರತಾಪ್ 
ಬಳ್ಳಾರಿ

ಶನಿವಾರದಂದು ಕ್ಯಾಂಡಲ್ ಮಾರ್ಚ್

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಇಂದಿನ ಯುವಪೀಳಿಗೆಗೆ ತಿಳಿಸುವ ಉದ್ದೇಶ
  • ವೀರ ಯೋಧರಿಗೆ ಗೌರವ ನಮನ
ಬಳ್ಳಾರಿ : ನಗರದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜು.25ರಂದು ಕ್ಯಾಂಡಲ್ ಮಾರ್ಚ್ ಹಾಗೂ ಜು.26ರಂದು ಅಮರ್ ಜವಾನ್ ಸ್ಮಾರಕದ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಅಣ್ಣಗೇರಿ ವೀರಪ್ರತಾಪ್ ಎಂದು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂದು ಸಂಜೆ ಸಂಜೆ ನಗರದ ಎಸ್ಪಿ ವೃತ್ತದಿಂದ ದುರ್ಗಮ್ಮ ದೇವಸ್ಥಾನ ಬಳಿಯಿರುವ ಅಮರ್ ಜವಾನ್ ಸ್ಮಾರಕದವರೆಗೆ ಕ್ಯಾಂಡಲ್ ಮಾರ್ಚ್ ನಡೆಯಲಿದೆ ಎಂದರು. ಜು.26ರಂದು ಸಂಜೆ ಅಮರ್ ಜವಾನ್ ಸ್ಮಾರಕದ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಗಣ್ಯರು, ಮಾಜಿ ಸೈನಿಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವುದರ ಜತೆಗೆ, ಅವರ ತ್ಯಾಗ, ದೇಶಭಕ್ತಿ ಮತ್ತು ಸೈನಿಕರ ಸೇವೆಯ ಮಹತ್ವವನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕ್ಯಾಂಡಲ್ ಮಾರ್ಚ್‌ನಲ್ಲಿ ರೈತ ಸಂಘ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸಾರ್ವಜನಿಕರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ನಗರದ ನಾನಾ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಸಂಘದ ಪದಾಧಿಕಾರಿಗಳಾದ ಲಕ್ಷ್ಮಣ್ ಹವಾಲ್ದಾರ್, ಮಲ್ಲಿಕಾರ್ಜುನ, ರಾಮಕೃಷ್ಣ, ಚಂದ್ರಕಲಾ, ವಿಜಯ, ಸರೋಜ, ಗಿರಿಜಾ, ಮಂಜುಳಾ, ವಿನಯ್ ಕುಮಾರ್, ರುದ್ರಮುನಿ, ಅಂಜಿನಪ್ಪ, ಸುರೇಂದ್ರ ಇದ್ದರು.
==