ಬಳ್ಳಾರಿ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಪರಿಣಾಮ ಬೆಂಕಿಗೆ ಕಾರು ಆಹುತಿಯಾದ ಘಟನೆ ಇಲ್ಲಿನ ಗವಿಯಪ್ಪ ವೃತ್ತದ ಬಳಿ ಸೋಮವಾರ ನಡೆದಿದೆ.
ಸಂಡೂರು ತಾಲೂಕಿನ ತೋರಣಗಲ್ ಎಂ.ರಾಜು ಎಂಬುವವರ ಕಾರು ಆಗಿದೆ. ತೋರಣಗಲ್‌ನಿಂದ ನಗರಕ್ಕೆ ಆಗಮಿಸುವ ವೇಳೆ ಇದ್ದಕ್ಕಿದಂತೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಕಾರಿನಲ್ಲಿದ್ದವರನ್ನು ಇಳಿಸಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿದ್ದಾರೆ. ಸಂಚಾರ ಠಾಣಾ ಪೊಲೀಸರು ಸುಗಮ ಸಂಚಾರಕ್ಕೆ ಅನುವ ಮಾಡಿಕೊಟ್ಟರು.