ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ಮುಂಭಾಗದಲ್ಲಿ ಬ್ಯಾನರ್ ಗಲಾಟೆಯ ದೊಂಬಿ ಪ್ರಕರಣದ ಆರೋಪದಡಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ವಾಹನ ಹತ್ತಿಸಲಾಯಿತು. 
ಬಳ್ಳಾರಿ

ಖಾಸಗಿ ಅಂಗರಕ್ಷಕನಿಂದ ಸಿಡಿದ ಬುಲೆಟ್

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅಂಗರಕ್ಷಕ
  • ಅಳವಡಿಕೆ
  • ಪ್ರಕರಣ
ಬಳ್ಳಾರಿ : ಬ್ಯಾನರ್ ಅಳವಡಿಕೆಯಲ್ಲಿ ಮೃತಪಟ್ಟ ಯುವಕನ ದೇಹದಲ್ಲಿ ಶಾಸಕ ನಾರಾಭರತ ರೆಡ್ಡಿ ಅಪ್ತ, ಸತೀಶ್‌ರೆಡ್ಡಿಯ ಖಾಸಗಿ ಅಂಗರಕ್ಷಕ ಗುರುಚರಣ್‌ಸಿಂಗ್ ಬಂದೂಕಿನಿಂದ ಸಿಡಿದ ಗುಂಡೇಟಿನಿಂದ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ಖಚಿತಪಡಿಸಿದ್ದೇವೆ.
ಈಗಾಗಲೇ ಪಂಜಾಬ್ ಮೂಲದ ಬಲ್ವಿಂಧರ್ ಸಿಂಗ್, ಗುರುಚರಣ್ ಸಿಂಗ್ ಬಂಧಿಸಲಾಗಿದೆ. ಪೊಲೀಸರು ಜಿಲ್ಲೆಯ ಶಾಸಕ ನಾರಾಭರತರೆಡ್ಡಿ, ಅಪ್ತ ಸತೀಶ್‌ರೆಡ್ಡಿಯ ಖಾಸಗಿ ಅಂಗರಕ್ಷಕರಿಂದ ಒಟ್ಟು ಐದು ಬಂದೂಕುಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್ಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಗುರುಚರಣ್ ಸಿಂಗ್ ಎಂಬ ಅಂಗರಕ್ಷಕನ ಬಂದೂಕಿನಿಂದ ಸಿಡಿದ ಗುಂಡಿನಿಂದ ಮೃತಪಟ್ಟಿರುವುದಾಗಿ ಬಹುತೇಕ ಖಚಿತವಾಗಿದೆ. ಇನ್ನೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸತೀಶ್ ರೆಡ್ಡಿ ಗಲಾಟೆಯಲ್ಲಿ ತಲೆಗೆ ಪೆಟ್ಟಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ನಗರದ ಹವಂವಾವಿಯ ಬ್ಯಾನರ್ ಅಳವಡಿಕೆ ಸಂಬಂಧ ಘರ್ಷಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸೇರಿ ಒಟ್ಟು ಆರು ಪ್ರಕರಣಗಳು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಇದರ ಸಂಬಂಧ ಪ್ರಕರಣದ ತನಿಖೆಯ ವೇಳೆಯಲ್ಲಿ ದೊರೆತೆ ಸಾಕ್ಷಿಗಳ ಹಾಗೂ ವೀಡಿಯೊ ಫೋಟೇಜ್‌ಗಳ ಆಧಾರದಡಿ ಇಬ್ಬರು ಖಾಸಗಿ ಅಂಗರಕ್ಷಕರು ಸೇರಿ ಬಿಜೆಪಿಯ ಹನ್ನೊಂದು ಹಾಗೂ ಕಾಂಗ್ರೆಸ್‌ನ ಹದಿನೈದು ಆರೋಪಿಗಳು ಒಟ್ಟು 26 ಜನರನ್ನು ದೊಂಬಿ ಪ್ರಕರಣದ ಆರೋಪದಡಿ ಅಪಾದಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಎಸ್ಪಿಯಾಗಿ ಉಸ್ತುವಾರಿ ವಹಿಸಿಕೊಂಡಿರುವ ರಂಜಿತ್ ಕುಮಾರ ಬಂಡಾರು ಪ್ರಕಟಣೆ ಹೊರಡಿಸಿದ್ದಾರೆ.
04 ಎರ‌್ರಿಸ್ವಾಮಿ 04
ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ಮುಂಭಾಗದಲ್ಲಿ ಬ್ಯಾನರ್ ಗಲಾಟೆಯ ದೊಂಬಿ ಪ್ರಕರಣದ ಆರೋಪದಡಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ವಾಹನ ಹತ್ತಿಸಲಾಯಿತು.