ಬಳ್ಳಾರಿ : ವಾಲ್ಮೀಕಿ ಪುತ್ಥಳಿ ಅನಾವರಣದ ಘರ್ಷಣೆಯಲ್ಲಿ ಮೃತಪಟ್ಟ ಯುವಕ ದೇಹದಲ್ಲಿ ಖಾಸಗಿ ಅಂಗರಕ್ಷಕ ಗುರುಚರಣ್ ಸಿಂಗ್ ಬಂದೂಕಿನಿಂದ ಸಿಡಿದ ಗುಂಡು ಎಂಬುದಾಗಿ ಪೊಲೀಸರು ಖಚಿತಪಡಿಸಿದ್ದಾರೆ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ನಾರಾ ಭರತರೆಡ್ಡಿ ಪತ್ನಿಯೂ ಈಚೆಗೆ ವಾಲ್ಮೀಕಿ ಪುತ್ಥಳಿ ಅನಾವರಣದ ಸಿದ್ಧತೆಗಾಗಿ ಎಸ್ಪಿ ವೃತ್ತಕ್ಕೆ ಭೇಟಿ ನೀಡಿದ ವೇಳೆ ಆರೋಪಿ ಗುರುಚರಣ್ ಸಿಂಗ್ ಸೇರಿ ನಾಲ್ವರು ಖಾಸಗಿ ಅಂಗರಕ್ಷಕ ರಕ್ಷಣೆಗಿದ್ದರು. ಅಲ್ಲದೆ, ಅಪ್ತ ಸತೀಶ್‌ರೆಡ್ಡಿ ಜತೆ ಆರೋಪಿ ಗುರುಚರಣ್ ಸಿಂಗ್ ಸೇರಿ ನಾಲ್ವರು ಖಾಸಗಿ ಅಂಗರಕ್ಷಕರನ್ನು ಗಲಾಟೆಗಾಗಿ ಶಾಸಕ ನಾರಾ ಭರತರೆಡ್ಡಿ ಕಳುಹಿಸಿದ್ದಾರೆ ಎಂದು ಆರೋಪಿಸಿದರು. ಹಾಲಿ ಶಾಸಕರೇ ಮೇಲೆಯೆ ಹತ್ಯೆಗೆ ಸಂಚು ನಡೆದಿದ್ದು, ಕಾನೂನು ಸಂಪೂರ್ಣ ವೈಪಲ್ಯವಾಗಿದೆ ಎಂದರು.
ದಾಳಿಯಲ್ಲಿ ಶಾಸಕ ನಾರಾಭರತರೆಡ್ಡಿ ಖಾಸಗಿ ಅಂಗರಕ್ಷಕರ ಗನ್‌ನಿಂದ ಸಿಡಿದಿರುವ ಮೂರು ಬುಲೆಟ್‌ಗಳು ಮನೆಯ ಆವರಣದಲ್ಲಿ ದೊರೆತಿದ್ದು, ನನ್ನ ಬಳಿಯೇ ಇವೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್ ) ತಂಡ ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ ಎಂದರು.