ಬೈಕ್ ಸವಾರ ಮೃತ 
ಬಳ್ಳಾರಿ

ಬೈಕ್ ಸವಾರ ಮೃತ

ಪ್ರಮುಖ ಮುಖ್ಯಾಂಶಗಳು

  • ಬೈಕ್ ಸವಾರ ಸ್ಥಳದಲ್ಲೇ ಮೃತ
ಬಳ್ಳಾರಿ : ಬೈಪಾಸ್ ರಸ್ತೆಯಲ್ಲಿ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಡೂರು ತಾಲೂಕಿನ ತೋರಣಗಲ್ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕಂಪ್ಲಿ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿ ಎರ‌್ರಿಸ್ವಾಮಿ (20)ಮೃತ. ಜಿಂದಾಲ್ ಕಾರ್ಖಾನೆ ಸಮೀಪದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ತೋರಣಗಲ್ ಗ್ರಾಮದ ಕಡೆಗೆ ಬರುವಾಗ ಘಟನೆ ಸಂಭವಿಸಿದೆ. ಈ ಕುರಿತು ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
====