ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಯಗಳಿಸಿದವರಿಗೆ ಬಹುಮಾನಗಳನ್ನು ವಿತರಣೆ ಸಂದರ್ಭ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಶಂಕರ ಇದ್ದರು. 
ಬಳ್ಳಾರಿ

ಮೀಸಲಿನಿಂದ ವಿದ್ಯಾರ್ಜನೆಗೆ ಅನುಕೂಲ

ಸಂಡೂರು: ಕ್ರೀಡೆಗಳಿಂದ ಮಾನಸಿಕ-ದೈಹಿಕ ಬೆಳವಣಿಗೆಗೆ ಅನುಲೂಕ ಎಂದು ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಹೇಳಿದರು. ತೋರಣಗಲ್ ಬ್ಯಾಡ್ಮಿಂಟನ್ ಸ್ಪೋಟ್ಸ್ ಕ್ಲಬ್‌ನಂದ ಸರ್ಕಾರಿ ಪ್ರೌಢಶಾಲೆ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಫ್ರೀಡಂ ಕಪ್-2026 ಸಂಡೂರು ವಿಭಾಗ ಮಟ್ಟದ ಮುಕ್ತ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಾತನಾಡಿದರು.

ದೇಸಿ ಕ್ರೀಡೆಗಳಲ್ಲೂ ಸರ್ಕಾರ ಮೀಸಲಾತಿ ಕಲ್ಪಿಸಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ವಿದ್ಯಾರ್ಜನೆಗೆ ಅನುಕೂಲ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಏಕಾಂಬರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎನ್. ಶಂಕರ, ಜೆಎಸ್‌ಡಬ್ಲುೃ ಫೌಂಡೇಷನ್‌ನ ಮಹ್ಮದ್ ರಫೀಕ್, ಗ್ರಾಪಂ ಮಾಜಿ ಸದಸ್ಯರಾದ ಹೇಮಚಂದ್ರಪ್ಪ, ಕೆ.ಮಂಜುನಾಥ್, ಎನ್.ಗಣೇಶ್ ಹಾಗೂ ಚೌದ್ರಿ ಹೋಟೆಲ್ ಮಾಲೀಕ ರಾಘವೇಂದ್ರ, ಪ್ರಮುಖರಾದ ಪ್ರಕಾಶ್, ಶಿವಕುಮಾರ್, ಸುರೇಶ್, ಯು. ಶಿವು, ಶ್ರೀಕಾಂತ್, ವಿಜಯ, ಬಸವ, ಎನ್. ಮಂಜು, ರಘು, ಶ್ರೀನಿವಾಸ, ಗಂಗಾಧರ ಇತರರಿದ್ದರು.
ಪಂದ್ಯಾವಳಿಯಲ್ಲಿ ತೋರಣಗಲ್‌ನ ಶಿವರುದ್ರ ಮತ್ತು ವಿಜಯಕುಮಾರ್ ಪ್ರಥಮ, ಜೆಎಸ್‌ಡಬ್ಲುೃನ ಅಬ್ಬಾಸ್ ಮತ್ತು ಅಮೋಘ್ ದ್ವಿತೀಯ, ಎನ್‌ಎಂಡಿಸಿಯ ಕೆ.ಉಮೇಶ್ ಮತ್ತು ಶಫೀಪಾಷಾ ತೃತೀಯ ಬಹುಮಾನ ಹಾಗೂ ಸಂಡೂರಿನ ಅಫ್ಜಲ್ ಮತ್ತು ಗಣೇಶ್ 4ನೇ ಸ್ಥಾನ ಪಡೆದರು. ವೈಯಕ್ತಿಕ ಪ್ರಶಸ್ತಿಗಳಲ್ಲಿ ತೋರಣಗಲ್‌ನ ಶ್ರೀಕಾಂತ್ ಬೆಸ್ಟ್ ಸ್ಮ್ಯಾಷರ್, ಸಂಡೂರಿನ ಅಫ್ಜಲ್ ಬೆಸ್ಟ್ ಡಿಫೆಂಡರ್ ಹಾಗೂ ತೋರಣಗಲ್‌ನ ವಿಜಯಕುಮಾರ್ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದರು.