ಬಳ್ಳಾರಿ : ಇಲ್ಲಿನ ವಿಎಸ್‌ಕೆ ವಿವಿಯೂ ಬಿ.ಇಡಿ ಪದವಿಯ ಮೌಲ್ಯಮಾಪನ ಪೂರ್ಣಗೊಂಡು ಒಂದೇ ದಿನದಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಿ ಐತಿಹಾಸಿಕ ಸಾಧನೆ ಮೆರೆದಿದೆ ಎಂದು ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಳೆದ ತಿಂಗಳು ಮುಕ್ತಾಯಗೊಂಡಿದ್ದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಬಿ.ಇಡಿ ಪದವಿಯ ಮೌಲ್ಯಮಾಪನವನ್ನು ಸತತ ಹತ್ತು ದಿನಗಳಲ್ಲಿ ಪೂರೈಸಿ ಫಲಿತಾಂಶವನ್ನು ಯುಯುಸಿಎಂಎಸ್‌ನಲ್ಲಿ ಪ್ರಕಟಿಸಿದೆ. ವಿವಿಯ ಅಧೀನದಲ್ಲಿರುವ 14 ಕಾಲೇಜುಗಳು ಸುಮಾರು 2,500 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅವರು ಬರೆದಿದ್ದ 15 ಸಾವಿರ ಉತ್ತರ ಪತ್ರಿಕೆಗಳನ್ನು ಬಿ.ಇಡಿ ಕೋರ್ಸ್‌ನ 42 ಮೌಲ್ಯಮಾಪಕರು ಮೌಲ್ಯಮಾಪನ ಮಾಡಿದ್ದಾರೆ.