ಹರಪನಹಳ್ಳಿ ಪಾಳೇಗಾರರು ಬೈಲಾಟ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಡಾ.ಮಲ್ಲಯ್ಯ ಸೊಂಡೂರು ಉದ್ಘಾಟಿಸಿದರು. ಅಖಿಲ ಭಾರತ ಶಸಾಪ ತಾಲೂಕು ಅಧ್ಯಕ್ಷ ಬಾಗಳಿ ರಾಜಶೇಖರ, ಪ್ರಮುಖರಾದ ಬಸವರಾಜ್ ಶಿಗ್ಗಾಂವ, ಪಕ್ಕೀರೇಶ ಕೊಂಡಯಿ, ಚಂದ್ರಶೇಖರ ಗುರುವಯ್ಯ, ಮೌನೇಶ್ವರ ಭಜಂತ್ರಿ, ಎಂ ಮಾರುತಿ ಇದ್ದರು. 
ಬಳ್ಳಾರಿ

ಬಯಲಾಟ ಪುನರುಜ್ಜೀವನದ ಪ್ರತೀಕ

ಪ್ರಮುಖ ಮುಖ್ಯಾಂಶಗಳು

  • ಡಾ.ಮಲ್ಲಯ್ಯ ಸೊಂಡೂರು ಹೇಳಿಕೆ
  • ಬಯಲು ನಾಟಕ ಪ್ರದರ್ಶನ

ಹರಪನಹಳ್ಳಿ: ಕರ್ನಾಟಕದ ಸಮೃದ್ಧ ಜಾನಪದ ರಂಗಭೂಮಿ ಪರಂಪರೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಬಯಲಾಟ ಕೇವಲ ಮನರಂಜನೆಯ ಮಾಧ್ಯಮವಲ್ಲ, ಸಾಂಸ್ಕೃತಿಕ ವಿಶ್ವಕೋಶ ಎಂದು ಡಾ.ಮಲ್ಲಯ್ಯ ಸೊಂಡೂರು ಹೇಳಿದರು.

ಹಡಗಲಿ ರಸ್ತೆಯಲ್ಲಿರುವ ಸಮಸ್ತರು ತಂಡದ ರಂಗಮಂದಿರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸಮಸ್ತರು ಸಾಂಸ್ಕೃತಿಕ ಸಂಘ ಸಹಯೋಗದಲ್ಲಿ ಬುಧವಾರ ಹರಪನಹಳ್ಳಿ ಪಾಳೇಗಾರರು ಬಯಲು ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ತಂತ್ರಜ್ಞಾನದ ಪ್ರಭಾವ ಮತ್ತು ಬದಲಾದ ಜೀವನಶೈಲಿಯಿಂಈ ಪ್ರಾಚೀನ ಕಲೆ ಇಂದು ಸಂಕಷ್ಟದಲ್ಲಿದೆ. ಅಖಂಡ ಬಳ್ಳಾರಿ ಜಿಲ್ಲೆಯ ಬಯಲಾಟಗಳ ಪುನರುಜ್ಜೀವನದ ಇನ್ನೊಂದು ಪ್ರತೀಕವಾಗಿದೆ ಎಂದರು.
ಶಕ್ತಿ ಅಭಿಯಾನದ ರಾಜ್ಯ ಸಮಿತಿ ಸದಸ್ಯೆ ವೀಣಾ ಮಹಾಂತೇಶ್ ಮಾತನಾಡಿ. ಹರಪನಹಳ್ಳಿಯ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ಯುವಜನರಲ್ಲಿ ಆಸಕ್ತಿ ಮೂಡಿಸಲು ಹಿರಿಯ ಕಲಾವಿದರಿಂದ ಕಾಲೇಜು ಮತ್ತು ಗ್ರಾಮ ಮಟ್ಟದಲ್ಲಿ ಬಯಲಾಟ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಅಕಾಡೆಮಿಯಿಂದ ವಿಶೇಷ ಪ್ಯಾಕೇಜ್ ಘೋಷಿಸಿ ಕಲಾವಿದರಿಗೆ ಮಾಸಾಶನ ಮತ್ತು ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದರು.