ಸಿರಿಗೇರಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕಲಾವಿದರಿಂದ ನಂದಿ ಕೋಲು ಪ್ರದರ್ಶನ ನಡೆಯಿತು. 
ಬಳ್ಳಾರಿ

ಬಸವಣ್ಣ ವಚನಗಳು ಇಂದಿಗೂ ಪ್ರಸ್ತುತ

ಪ್ರಮುಖ ಮುಖ್ಯಾಂಶಗಳು

  • ಪ್ರಕೃತಿ
ಬಳ್ಳಾರಿ : ಬಸವಣ್ಣ ಅವರು ದುಡಿಯುವವನೇ ರೈತ, ಪ್ರಕೃತಿಯೇ ಭೂಮಿ ಎಂದು ಪ್ರತಿಪಾದಿಸಿದವರು ಎಂದು ಉಪನ್ಯಾಸಕ ಡಾ.ಟಿ.ಎಚ್. ಬಸವರಾಜ್ ಹೇಳಿದರು.
ಗ್ರಾಮದ ಶ್ರೀನಾಗನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಕ ನಾಗಮ್ಮ ಅವರು ತಾರ್ಕಿಕ ಚಿಂತನೆಗಳಿಂದಲೇ ಹೆಸರುವಾಸಿಯಾಗಿ ಕ್ರಾಂತಿಯ ಗಂಗೋತ್ರಿ ಎಂದು ಬಿರುದು ಪಡೆದುಕೊಂಡರು. ಬಸವಣ್ಣ ಅವರು ಸತ್ಯ, ಶುದ್ಧ, ಕಾಯಕ ಪ್ರಾಮಾಣಿಕ ಹಾದಿಯಲ್ಲಿ ನಡೆದರೆ ಜೀವನ ಅಸನಾಗುತ್ತದೆ ಎಂಬುದಾಗಿ ತಿಳಿಸಿದವರು ಎಂದರು.
ಕೊಟ್ಟೂರು ಶಾಖಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರ ವಚನಗಳನ್ನು ಅಧ್ಯಯನಶೀಲರಾಗಿ ಕಾಯಕ ದಾಸೋಹ, ಶಿಕ್ಷಣ ಯಾರು ಪ್ರತಿಫಲ ಇಲ್ಲದೆ ನೀಡುತ್ತಾರೋ ಅವರೇ ನಿಜವಾದ ದೈವ ಸಂಭೂತ ಉಳ್ಳವರು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಬಸವಣ್ಣ ಅವರ ಭಾವಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನಾನಾ ಕಲಾ ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು. ವೇದಿಕೆ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಬಸವರಾಜ್ ಗೌಡ, ಉಮಾಪತಿಗೌಡ, ಬಿ.ಆರ್.ಚನ್ನಬಸವನಗೌಡ, ಶಿವಪ್ರಸಾದ್, ರವಿಶಂಕರ್ ಇತರರಿದ್ದರು.
===