ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಬಾಬೂಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರೊ. ಎಚ್. ತಿಪ್ಪೇಸ್ವಾಮಿ, ಉಪನ್ಯಾಸಕರಾದ ಡಾ. ನರಸಿಂಹ ಮೂರ್ತಿ, ಡಾ. ಕೆ. ಜಿ. ಸುಮಾ, ಎಸ್. ಎಂ. ಶಶಿಧರ ಇದ್ದರು. 
ಬಳ್ಳಾರಿ

ಅಭಿವೃದ್ಧಿಗೆ ಬಾಬೂಜಿ ಕೊಡುಗೆ ಅಪಾರ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ತಿಪ್ಪೇಸ್ವಾಮಿ ಅಭಿಮತ
ಸಂಡೂರು: ಸಾಮಾಜಿಕ ನ್ಯಾಯಕ್ಕಾಗಿ ಜೀವನ ಮುಡಿಪಾಗಿಟ್ಟ ಮಹಾನ್ ಚೇತನ ಬಾಬು ಜಗಜೀವನರಾಮ್. ಅವರು ಕೇವಲ ರಾಜಕಾರಣಿಯಾಗಿರಲಿಲ್ಲ, ಬದಲಾಗಿ ಸಮ ಸಮಾಜದ ನಿರ್ಮಾತೃವಾಗಿದ್ದರು ಎಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಚ್. ತಿಪ್ಪೇಸ್ವಾಮಿ ಹೇಳಿದರು.
ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಬಾಬು ಜಗಜೀವನರಾಮ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬೂಜಿ ಅವರು ತುಳಿತಕ್ಕೊಳಗಾದ ವರ್ಗದವರ ಧ್ವನಿಯಾಗಿ, ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳು ದೊರಕಬೇಕು ಎಂಬ ಅವರ ಆಶಯವನ್ನು ನಾವೆಲ್ಲರೂ ಸಾಕಾರಗೊಳಿಸಬೇಕಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ದೇಶದ ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಅವರು ಕೈಗೊಂಡ ಸುಧಾರಣಾ ಕ್ರಮಗಳು ಇಂದಿಗೂ ನಮಗೆ ದಾರಿದೀಪವಾಗಿವೆ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ದೇಶವನ್ನು ಕಟ್ಟುವುದು ಅವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ ಎಂದರು.
ಅಧ್ಯಾಪಕರಾದ ಡಾ. ನರಸಿಂಹ ಮೂರ್ತಿ, ಡಾ. ಮಲ್ಲಯ್ಯ ಸಂಡೂರು, ಡಾ. ವಿರೂಪಾಕ್ಷ, ಲಕ್ಷ್ಮಣ ತೋಳ್ಸಿ ಮಾತನಾಡಿದರು. ಉಪನ್ಯಾಸಕರಾದ ಡಾ. ಕೆ. ಜಿ. ಸುಮಾ, ಎಸ್. ಎಂ. ಶಶಿಧರ, ಡಾ. ಶರತ್, ಬಸವರಾಜ ಹಟ್ಟಿ, ಡಾ. ಮುಬಾರಕ್, ಕ್ರೀಡಾ ನಿರ್ದೇಶಕ ಶಿವರಾಮ್ ರಾಗಿ ಇದ್ದರು. ಕ್ರೀಡಾ ಸಹಾಯಕ ಕೆ. ಪಾಪಯ್ಯ ಹಾಗೂ ವಾಣಿಜ್ಯ ವಿಭಾಗದ ಅಧ್ಯಾಪಕ ಬಸವರಾಜ ಈಳಿಗನೂರು ಕಾರ್ಯಕ್ರಮ ನಿರ್ವಹಿಸಿದರು.