ಹಗರಿಮೊಮ್ಮನಹಳ್ಳಿಯಲ್ಲಿ ಆದಾಯ ತೆರಿಗೆ ಕಾನೂನಿನ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ಉದ್ಘಾಟಿಸಿದರು. ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ವಾಣಿಜ್ಯ ತೆರೆಗೆ ಅಧಿಕಾರಿ ಪ್ರವೀಣ್, ಕ್ಲಾಥ್ ಮಚರ್ಂಟ್ ಅಧ್ಯಕ್ಷ ನಾಗರಾಜ್ ಸಾಲ್ಮನಿ ಇತರರಿದ್ದರು. 
ಬಳ್ಳಾರಿ

ತೆರಿಗೆ ಕಟ್ಟಲು ನಿರ್ಲಕ್ಷಿಸದಿರಿ

ಪ್ರಮುಖ ಮುಖ್ಯಾಂಶಗಳು

  • ಆದಾಯ ತೆರಿಗೆ ಕಾನೂನಿನ ಜಾಗೃತಿ
ತೆರಿಗೆ ಕಟ್ಟಲು ನಿರ್ಲಕ್ಷಿಸದಿರಿ

ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ಕಿವಿಮಾತು

ಹಗರಿಬೊಮ್ಮನಹಳ್ಳಿ: ವ್ಯಾಪಾರಿಗಳು ಹಾಗೂ ಇತರರು ತೆರಿಗೆ ಪಾವತಿಸುವಲ್ಲಿ ನಿರ್ಲಕ್ಷಿಸಬಾರದು ಎಂದು ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಚೇಂಬರ್ ಆಫ್ ಕಾಮರ್ಸ್, ಚಾರ್ಟರ್ಡ್ ಅಕೌಂಟೆಂಟ್ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆದಾಯ ತೆರಿಗೆ ಕಾನೂನಿನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆರಿಗೆದಾರರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಬೇಕು. ತೆರಿಗೆ ಪಾವತಿಸುವ ಪ್ರತಿಯೊಬ್ಬರೂ ಸರ್ಕಾರದ ಪ್ರತಿನಿಧಿಯಾಗಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಲುಪುವ ತೆರಿಗೆ ಹಣವನ್ನು ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ಕೆ ಬಳಸಲಾಗುತ್ತದೆ. ಕೇಂದ್ರ ಸರ್ಕಾರದ ಆದಾಯ ತೆರಿಗೆಯಲ್ಲಿ ಅತಿ ಹೆಚ್ಚು ಮಿಲಿಟರಿಗೆ ವ್ಯಯಿಸಲಾಗುತ್ತದೆ.
ಈ ಹಿಂದೆ 8 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ನೀಡಬೇಕಾಗಿತ್ತು. ಮುಂದಿನ ವರ್ಷ 12 ಲಕ್ಷ ರೂ.ವರೆಗೆ ಆದಾಯವಿದ್ದರೂ ತೆರಿಗೆ ಕಟ್ಟುವಂತಿಲ್ಲ. ವೈಯಕ್ತಿಕ ಆದಾಯ ಸೇರಿದಂತೆ ವ್ಯಾಪಾರದ ಆದಾಯ ಶೂನ್ಯವಿದ್ದರೂ ಪ್ರತಿವರ್ಷ ಐಟಿ ರಿಟರ್ನ್ ಕೊಡಬೇಕು ಎಂದರು.
ಚಾರ್ಟರ್ಡ್ ಅಕೌಂಟ್ ಅಕ್ಕಿ ಬಸವರಾಜ ಮಾತನಾಡಿ, ಕಳೆದ 20 ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ತೆರಿಗೆ ಪಾವತಿ ಪ್ರಕ್ರಿಯೆ ಸರಳವಾಗಿದೆ ಎಂದರು.
ಸಿಎಗಳಾದ ಬಿ.ಎಸ್.ಸರ್ಪಭೂಷಣ್, ವಿನಾಯಕ ಕೊಬ್ಬಜ್ಜಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ವಾಣಿಜ್ಯ ತೆರೆಗೆ ಅಧಿಕಾರಿ ಪ್ರವೀಣ್, ಕ್ಲಾಥ್ ಮರ್ಚಂಟ್ ಸಂಘದ ಅಧ್ಯಕ್ಷ ನಾಗರಾಜ್ ಸಾಲ್ಮನಿ, ಬಿಡಿಸಿಸಿ ಬ್ಯಾಂಕ್ ಫೀಲ್ಡ್ ಆಫೀಸರ್ ಪಾರಣ್ಣ, ಬಾದಾಮಿ ಪ್ರಭುಲಿಂಗಪ್ಪ ಆಡಿಟರ್ ನಟರಾಜ್ ಬಂಗಾರಿ, ಸೌಹಾರ್ದ ಸಹಕಾರ ಸಂಘದ ಸಿಬ್ಬಂದಿ, ವ್ಯಾಪಾರಸ್ಥರು, ತೆರಿಗೆ ಸಲಹೆಗಾರರು ಇದ್ದರು.