ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್  
ಬಳ್ಳಾರಿ

ರಿಕ್ರಿಯೇಷನ್ ಕ್ಲಬ್‌ಗಳ ಮೇಲೆ ದಾಳಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • 43 ಆರೋಪಿಗಳ ಬಂಧನ
  • ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ತಲೆಗೆ ತೀವ್ರ ಗಾಯ
ಬಳ್ಳಾರಿ :ತಾಲೂಕಿನ ಕುಡತಿನಿ ಪಟ್ಟಣದ ಎರಡು ಪ್ರಮುಖ ರಿಕ್ರಿಯೇಷನ್ ಕ್ಲಬ್‌ಗಳ ಮೇಲೆ ಪೋಲೀಸರು ದಾಳಿ ನಡೆಸಿ ಮೊಬೈಲ್, ನಗದು ವಶಪಡಿಸಿಕೊಂಡು ಹಾಗೂ ಜೂಜುಕೋರರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡತಿನಿಯ ಬಸವೇಶ್ವರ ಸ್ಪೋಟ್ಸ್ ಆ್ಯಂಡ್ ರಿಕ್ರಿಯೆಷನ್ ಕ್ಲಬ್‌ನಲ್ಲಿ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿ, 1.24 ಲಕ್ಷ ರೂ. ನಗದು, 20 ಮೊಬೈಲ್ಗಳನ್ನು ಜಪ್ತು ಮಾಡಲಾಗಿದ್ದು 23 ಆರೋಪಿಗಳ ವಿರುದ್ಧ ಜರುಗಿಸಲಾಗಿದೆ. ಗುರುರಾಯರ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ನಲ್ಲಿ 90 ಸಾವಿರ ರೂ. ನಗದು ಹಾಗು 39 ಮೊಬೈಲ್‌ಗಳನ್ನು ವಶಪಡಿಸಿಕೊಂಡು, 43 ಜನರನ್ನು ಬಂಧಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ವಿ.ಎಸ್.ಆರ್. ಸ್ಟೀಲ್ ಪ್ರೈವೇಟ್ ಲಿ. ಕಂಪನಿಯ ಗೇಟ್ ಬಳಿ ಜೂ.8ರಂದು ಸಂಭವಿಸಿದ ಬೈಕ್ ಅಪಘಾತದಲ್ಲಿ ಸಿದ್ದೇಶ್ (32) ಎಂಬುವವರು ಮೃತಪಟ್ಟಿದ್ದಾನೆ. ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲಕುಂದಿಯಿಂದ ಹೊನ್ನಳ್ಳಿ ರಸ್ತೆಯಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 69 ಸಾವಿರ ರೂ. ಮೌಲ್ಯದ 30 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಪ್ತು ಮಾಡಿ, ಮಹೇಶ್ ಹಾಗೂ ಗಾದಿಲಿಂಗಪ್ಪ ಎಂಬುವವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 2.93 ಲಕ್ಷ ರೂ. ಸೈಬರ್ ವಂಚನೆ: ಹುಸೇನ್ ಸಾಬ್ ಎಂಬುವವರ ಬ್ಯಾಂಕ್ ಖಾತೆಯಿಂದ ಅವರ ಗಮನಕ್ಕೆ ಬಾರದಂತೆ ಹಣ ವರ್ಗಾವಣೆಯಾಗಿದೆ. ಖಾತೆಯಿಂದ ಅನಧಿಕೃತವಾಗಿ 2.93 ಲಕ್ಷ ರೂ. ವರ್ಗಾವಣೆಯಾಗಿದೆ ಎಂದು ಹುಸೇನ್ ಸಾಬ್ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪ್ರಕಣೆಯಲ್ಲಿ ತಿಳಿಸಿದೆ.
======