ಬಳ್ಳಾರಿಯ ಎಡಿಸಿ ಕಚೇರಿಯ ಮುಂಭಾಗದಲ್ಲಿ ಪಾಲಿಕೆ ಇಂಜನಿಯರ್ ಮೇಲಿನ ಹಲ್ಲೆ ಖಂಡಿಸಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಡಿಸಿ ಮಹಮ್ಮದ್ ಎನ್.ಜುಬೇರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಳ್ಳಾರಿ : ಮಹಾನಗರ ಪಾಲಿಕೆಯಲ್ಲಿ ಇಂಜನಿಯರ್‌ಯಾಗಿ ಸೇವೆ ಸಲ್ಲಿಸುತ್ತಿರುವ ಜೆ.ಎಂ.ವೀರೇಶ್ ಮೇಲಿನ ಹಲ್ಲೆ ಖಂಡಿಸಿ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆರೋಪಿತ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಡಿಸಿ ಅವರಿಗೆ ಮನವಿಗೆ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಭದ್ರಯ್ಯ ಮಾತನಾಡಿ, ಒಬ್ಬ ಸರ್ಕಾರಿ ನೌಕರನ ಮೇಲೆ ಸಾರ್ವಜನಿಕವಾಗಿ ನಡೆದ ದೌರ್ಜನ್ಯವು ನೌಕರರ ವಲಯದಲ್ಲಿ ಅಭದ್ರತೆ ಮೂಡಿಸಿದೆ. ಕರ್ತವ್ಯನಿರತ ನೌಕರನ ಮೇಲೆ ಹಲ್ಲೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತವು ಕಟ್ಟನಿಟ್ಟಿನ ಕಾನೂನು ಕ್ರಮಜರುಗಿಸಬೇಕು. ಪಾಲಿಕೆ ಸದಸ್ಯ ಕುಬೇರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ನ್ಯಾಯದ ಪರವಾಗಿ ತಕ್ಷಣವಾಗಿ ಸ್ಪಂದಿಸಿ ನೊಂದ ನೌಕರರಿಗೆ ನ್ಯಾಯ ಒದಗಿಸಬೇಕು ಎಂದರು.