ಡಾ.ಪುರುಷೋತ್ತಮಗೌಡ 
ಬಳ್ಳಾರಿ

ಎಲ್‌ಎಲ್ ಕಾಲುವೆಗೆ ನೀರು ಹರಿಸುವ ಭರವಸೆ

ಪ್ರಮುಖ ಮುಖ್ಯಾಂಶಗಳು

  • ನೀರು ಬಿಡುಗಡೆ ಮಾಡಲು ಅಗತ್ಯ ಕ್ರಮ

ಬಳ್ಳಾರಿ :

ಆಂಧ್ರದ ವಿಜಯವಾಡದಲ್ಲಿ ತುಂಗಭದ್ರಾ ಜಲಾಶಯದಿಂದ ಆಂಧ್ರ ಪಾಲಿನ ಎಲ್‌ಎಲ್ ಕಾಲುವೆಗೆ ನೀರು ಹರಿಸುವುದರ ಬಗ್ಗೆ ಮಂಗಳವಾರ ಸಭೆ ನಡೆಯಿತು.

ಆಂಧ್ರಪ್ರದೇಶದ ಜಲಸಂಪನ್ಮೂಲ ಸಚಿವ ನಿರ್ಮಲಾ ರಾಮಾನಾಯ್ಡು, ಇಂಜಿನಿಯರ್‌ಗಳಾದ ನಾರಾಯಣ ನಾಯಕ್, ಶೈಲೇಶ್, ಟಿಪ್ಪು ಸುಲ್ತಾನ್, ಮಿಕ್ಕಿನೇನಿ ಪ್ರಸಾದ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು. ತುಂಗಭದ್ರಾ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಎರಡೂ ರಾಜ್ಯಗಳ ರೈತರ ಹಿತರಕ್ಷಣೆ ಹಾಗೂ ಎಲ್‌ಎಲ್ ಕಾಲುವೆಗೆ ಸದ್ಯದಲ್ಲೇ ನೀರು ಹರಿಸುವ ಕುರಿತು ಚರ್ಚಿಸಲಾಯಿತು. ರೈತರ ಬೆಳೆಗೆ ನೀರಿನ ವಿಷಯವನ್ನು ಆಂಧ್ರ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರ ಗಮನಕ್ಕೆ ತಂದು, ತಕ್ಷಣವೇ ನೀರು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸಭೆಯಲ್ಲಿ ಭರವಸೆ ನೀಡಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ.ಪುರುಷೋತ್ತಮಗೌಡ ಸಾಮಾಜಿಕ ತಾಣದಲ್ಲಿ ಹಂಚಿಕೆ ಕೊಂಡಿದ್ದಾರೆ.