ನಂ.10ಮುದ್ದಾಪುರ ಗ್ರಾಮದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ಬಂಧನಕ್ಕೆ ಆಗ್ರಹಿಸಿ ಕಂಪ್ಲಿಯಲ್ಲಿ ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆಗೆ ದಲಿತ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.  
ಬಳ್ಳಾರಿ

ಹಲ್ಲೆ ನಡೆಸಿದವರನ್ನು ಬಂಧಿಸಿ

ಅಶೋಕ್ ಕುಮಾರ್ ಎನ್
ಕಂಪ್ಲಿ: ನಂ.10ಮುದ್ದಾಪುರ ಗ್ರಾಮದಲ್ಲಿ ಫೆ.11ರಂದು ರಸಿಕ ಎನ್ನುವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವವರನ್ನು ಬಂಧಿಸಬೇಕೆಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ ಆಗ್ರಹಿಸಿದರು.
ನಂ.10ಮುದ್ದಾಪುರ ಗ್ರಾಮದಿಂದ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ಜನಶಕ್ತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ದಲಿತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನಾ ಪಾದಯಾತ್ರೆ ನಡೆಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆಗೆ ಮನವಿ ಸಲ್ಲಿಸಿ ಭಾನುವಾರ ಮಾತನಾಡಿದರು.
ಕೆಲ ಪೊಲೀಸ್ ಸಿಬ್ಬಂದಿ ಕುಮ್ಮಕ್ಕಿನಿಂದ 13ಜನ ದಲಿತರ ವಿರುದ್ಧ ದಾಖಲಾಗಿರುವ ಕೌಂಟರ್ ಕೇಸನ್ನು ಕೈಬಿಡಬೇಕು. ಹಲ್ಲೆ ಆರೋಪಿತರಿಗೆ ಸಹಕರಿಸಿದ ಪೊಲೀಸರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಸುಳ್ಳು ಪ್ರಕರಣ ದಾಖಲಾಗಿರುವ 13 ಜನ ದಲಿತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಾಲ ನೀಡಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿಫಾರಸ್ಸು ನೀಡಬೇಕು. ನಂ.10ಮುದ್ದಾಪುರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆ ಮಾತನಾಡಿ, ಯುವಕನ ಮೇಲಿನ ಹಲ್ಲೆ ಪ್ರಕರಣ, ಕೌಂಟರ್ ಕೇಸ್ ದಾಖಲು ಕುರಿತಂತೆ ನಾಗರಿಕ ಹಕ್ಕುಗಳ ಜಾರಿ ಕೋಶ (ಸಿಆರ್‌ಇ ಸೆಲ್) ತನಿಖೆ ನಡೆಸುತ್ತಿದೆ. ಪಾರದರ್ಶಕ ತನಿಖೆಗೆ ಅಗತ್ಯ ದಾಖಲೆ, ಸಾಕ್ಷೃ ಸಂಗ್ರಹಕ್ಕೆ ಅಗತ್ಯ ಮಾಹಿತಿ ಒದಗಿಸಲಾಗುವುದು. ಆರೋಪಿತ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.