ಸಿರಗುಪ್ಪದಲ್ಲಿ ತಹಸೀಲ್ದಾರ್ ಗೌಸಿಯಾ ಬೇಗಂ ಬ್ರೋಕರ್, ಮೀಡಿಯೇಟರ್ ಎಂದು ಕರೆದಿದ್ದಾರೆ ಎಂದು ಆರೋಪಿಸಿ ವಕೀಲರು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ಹನುಮಂತಪ್ಪ ಮತ್ತು ಪಿಎಸ್‌ಐ ಪರಶುರಾಮ ಇದ್ದರು.
ಸಿರಗುಪ್ಪ: ತಹಸೀಲ್ದಾರ್ ಗೌಸಿಯಾ ಬೇಗಂ ಬ್ರೋಕರ್, ಮೀಡಿಯೇಟರ್ ಎಂದು ಕರೆದಿದ್ದಾರೆ ಎಂದು ಆರೋಪಿಸಿ ವಕೀಲರು ತಹಸೀಲ್ದಾರ್ ವಾಹನ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕು ದಂಡಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣದ ಮುಂದಿನ ವಾದ ವಿವಾದಕ್ಕೆ ಕಾಲಾವಕಾಶ ಕೋರುವುದರೊಂದಿಗೆ ಆರು ತಿಂಗಳಿಂದ ಕಡತವನ್ನು ಜಿಲ್ಲಾಧಿಕಾರಿಗೆ ಕಳಿಸದೆ ಇಲ್ಲಿಯೇ ಇಟ್ಟುಕೊಳ್ಳಲಾಗಿದೆ ಎಂದು ವಕೀಲರು ಹೇಳಿದಾಗ, ತಹಸೀಲ್ದಾರ್ ಗೌಸಿಯಾ ಬೇಗಂ ನೀವೇನು ಬ್ರೋಕರ್, ಮೀಡಿಯೇಟರ್ ಎಂದು ವಕೀಲರಿಗೆ ಹಿಯ್ಯಳಿಸಿದರು ಎಂದು ಹೋರಾಟನಿರತರು ಆರೋಪಿಸಿದರು.
ಸ್ಥಳಕ್ಕೆ ಸಿಪಿಐ ಹನುಮಂತಪ್ಪ ಮತ್ತು ಪಿಎಸ್‌ಐ ಪರಶುರಾಮ ಆಗಮಿಸಿ ತಹಸೀಲ್ದಾರ್ ಹಾಗೂ ವಕೀಲರ ಮಧ್ಯೆ ಸಂಧಾನ ನಡೆಸಿದರು. ವಕೀಲರು ಮತ್ತು ತಹಸೀಲ್ದಾರ್ ಘಟನೆ ಕುರಿತು ಪರಸ್ಪರ ಕ್ಷಮೆ ಕೋರಿದರು.