ಕಾನಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಪಿಡಬ್ಲ್ಯುಡಿ ಎಇಇ ನಾಗನಗೌಡ, ಪ್ರಮುಖರಾದ ಕುರಿಹಟ್ಟಿ ಜಿ.ಓಬಣ್ಣ, ಪೂಜಾರಿ ಪ್ರಕಾಶ್ ಬಾಬು, ಬುಡ್ಡಾರೆಡ್ಡಿ ಇತರರಿದ್ದರು.
- ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿಕೆ
- ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ಕಾನಹೊಸಹಳ್ಳಿ: ಅರವತ್ತರ ದಶಕದಲ್ಲಿ ದೇಶದ ಮೊದಲ ಮಾದರಿ ಗ್ರಾಮವೆಂದು ಖ್ಯಾತಿ ಪಡೆದ ಚಿಕ್ಕಜೋಗಿಹಳ್ಳಿ ಗ್ರಾಮಕ್ಕೆ ಅಗತ್ಯ ಅನುದಾನ ತಂದು ಹಿಂದಿನ ಗತವೈಭವ ನೆನಪಿಸಲು ಅಗತ್ಯ ಕ್ರಮಕೈಗೊಳಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ 5 ಕೋಟಿ ರೂ. ವೆಚ್ಚದ ರಸ್ತೆ ಅಗಲೀಕರಣ ಮತ್ತು ಪಶು ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದಲ್ಲಿ ಕೇಂದ್ರೀಯ ಜವಹಾರ್ ನವೋದಯ ವಿದ್ಯಾಲಯ ಮತ್ತು 2 ಪ್ರೌಢಶಾಲೆಗಳಿದ್ದು, ಕೆಪಿಎಸ್ ಶಾಲೆ ಸಹ ಮಂಜೂರು ಮಾಡಲಾಗಿದೆ. ಸದ್ಯ ಬಾಲಕರಿಗೆ ವಸತಿ ನಿಲಯವಿದ್ದು, ಬಾಲಕೀಯರ ವಸತಿ ನಿಲಯಕ್ಕೆ ಅನುಮೋದನೆ ನೀಡಲಾಗಿದೆ.
ಇಲ್ಲಿನ ಎಪಿಎಂಸಿ ಉಪಮಾರುಕಟ್ಟೆಯ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ 3 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಕ್ಸರೇ ಯಂತ್ರವಿಲ್ಲದ ರೋಗಿಗಳಿಗೆ ತೊಂದರೆಯಾಗಿದೆ. ನೂತನ ಯಂತ್ರ ಖರೀದಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜೂನ್‌ನಲ್ಲಿ ಎಕ್ಸರೇ ಸೌಲಭ್ಯ ದೊರೆಯಲ್ಲಿದೆ. ಕೆಪಿಎಸ್ ಶಾಲೆ ಉದ್ಘಾಟನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಗಮಿಸುವರು ಎಂದರು.
ಮಾಕನಡಕು ಗ್ರಾಮದಲ್ಲಿ 12ಲಕ್ಷ ರೂ., ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ 1ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಚರಂಡಿ, 1.50 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ಸೇತುವೆ ಮತ್ತು 50 ಲಕ್ಷ ರೂ. ವೆಚ್ಚದ ಶಾಲೆ ಕಟ್ಟಡ ದುರಸ್ತಿ ಕಾಮಗಾರಿ ಹಾಗೂ ಕುರಿಹಟ್ಟಿ ಗ್ರಾಮದಲ್ಲಿ 35 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಪಿಡಬ್ಲ್ಯುಡಿ ಎಇಇ ನಾಗನಗೌಡ, ಗ್ರಾಪಂ ಕಾರ್ಯದರ್ಶಿ ಯು.ಎಂ.ಪ್ರಕಾಶ್, ಗುತ್ತಿಗೆದಾರ ಕೊಟ್ರೇಶ್, ಕೂಡ್ಲಿಗಿ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಚಿದಾನಂದರೆಡ್ಡಿ, ಪಶುವೈದ್ಯ ಸುನೀಲ್ ಯಾದವ್, ಪ್ರಮುಖರಾದ ಕೇಸರಿ ರಾಮಣ್ಣ, ರಹಮತ್, ಪೂಜಾರಿ ಪ್ರಕಾಶ್ ಬಾಬು, ಧನುಂಜಯ, ತಳವಾರ ಶರಣಪ್ಪ, ಬುಡ್ಡಾರೆಡ್ಡಿ ಇತರರಿದ್ದರು.