ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಒಳಮೀಸಲಾತಿ ಕಡ್ಡಾಯಗೊಳಿಸಲು ಆಗ್ರಹಿಸಿ ಕಂಪ್ಲಿಯಲ್ಲಿ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣನಾಯ್ಕಗೆ ದಲಿತ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.  
ಬಳ್ಳಾರಿ

ಒಳ ಮೀಸಲಿಗೆ ಮನವಿ

ಕಂಪ್ಲಿ: ಒಳ ಮೀಸಲಾತಿ ತಪ್ಪಿಸುವ ಹುನ್ನಾರವಾಗಿ 2026ನೇ ಫೆ.27ರಂದು ಸರ್ಕಾರ ಹೊರಡಿಸಿದ ಆದೇಶ ಹಿಂಪಡೆದು ನೇಮಕಾತಿಯಲ್ಲಿ ಒಳ ಮೀಸಲು ಕಡ್ಡಾಯಗೊಳಿಸಬೇಕು ಎಂದು ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣನಾಯ್ಕಗೆ ಮನವಿ ಸಲ್ಲಿಸಿ ಮಾತನಾಡಿ, ನೇರ ನೇಮಕಾತಿ, ಬಡ್ತಿ ಮತ್ತು ಮುಂಬಡ್ತಿ ಬ್ಯಾಕ್‌ಲಾಗ್ ನೇಮಕಾತಿಗಳಲ್ಲಿ, ಎಸ್‌ಇಪಿ, ಟಿಎಸ್‌ಪಿ ಅನುದಾನ ಬಳಕೆಗೂ ಒಳ ಮೀಸಲಾತಿ ಜಾರಿಗೊಳಿಸಬೇಕು. ಅಲೆಮಾರಿಗಳಿಗೆ ಪ್ರತ್ಯೇಕ ಶೇ.1ಮೀಸಲಾತಿ ನೀಡಬೇಕು. ಪಕ್ಷಪಾತಿಯಂತೆ ನಡೆದುಕೊಳ್ಳುತ್ತಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪರನ್ನು ಬದಲಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಗಳ ಪದಾಧಿಕಾರಿಗಳಾದ ವಸಂತರಾಜ ಕಹಳೆ, ಇ.ಧನಂಜಯ, ನೀಲಪ್ಪ ಪೇಂಟರ್, ಶಾಂತಪ್ಪ ಪೂಜಾರಿ, ಯಮುನಾ, ಶೋಭಾ, ಚನ್ನಮಲ್ಲಮ್ಮ, ಎಮ್ಮಿಗನೂರು ಜಡೆಪ್ಪ, ಮುದ್ದಾಪುರ ರಾಮಚಂದ್ರ, ಕುಮಾರಸ್ವಾಮಿ ಇತರರಿದ್ದರು.