ಬಿ.ಶ್ರೀರಾಮುಲು 
ಬಳ್ಳಾರಿ

ಸಂತ್ರಸ್ತೆಯ ಕುಟುಂಬದ ಕ್ಷಮೆಯಾಚಿಸುವೆ

ಪ್ರಮುಖ ಮುಖ್ಯಾಂಶಗಳು

  • ಸಮಾವೇಶ
ಬಳ್ಳಾರಿ : ನಗರದಲ್ಲಿ ಈಚೆಗೆ ನಡೆದ ಬಿಜೆಪಿ ಸಮಾವೇಶದ ಭಾಷಣದಲ್ಲಿ ಫೋಕ್ಸೋ ಸಂತ್ರಸ್ತೆಯ ವಿವರ ಪ್ರಸ್ತಾಪಿಸಿರುವೆ, ಈ ಬಗ್ಗೆ ಸಂತ್ರಸ್ಥೆ ಹಾಗೂ ಕುಟುಂಬಸ್ಥರ ಕ್ಷಮೆಯಾಚಿಸುವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾತಿನ ಭರದಲ್ಲಿ ಫೋಕ್ಸೋ ಪ್ರಕರಣದ ಬಾಲಕಿಯ ವಿವರ ಬಹಿರಂಗಪಡಿಸಿರುವೆ. ಆ ಸಂತ್ರಸ್ತೆಯೂ ನನ್ನ ಮಗಳಿದ್ದಂತೆ, ಆ ಕುಟುಂಬಕ್ಕೆ ಜತೆಗಿದ್ದು ನ್ಯಾಯ ಕೊಡಿಸುವೆ ಎಂದು ಹೇಳಿದರು.
ಬ್ಯಾನರ್ ಗಲಾಟೆಯಲ್ಲಿ ರಾಜಶೇಖರ ಎಂಬ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ಈಗಾಗಲೇ ಸಾವಿಗೆ ಸಂಬಂಧಪಟ್ಟ ವಿಡಿಯೋ ಹಾಗೂ ಅಗತ್ಯ ದಾಖಲೆಗಳನ್ನು ಸಿಐಡಿ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರ ಸಿಐಡಿಗೆ ವಹಿಸಿದ್ದೇವೆ ಎಲ್ಲವೂ ಮುಗಿದಿದೆ ಎಂಬುದಾಗಿ ಅಂದುಕೊಂಡಿದ್ದಾರೆ. ಶಾಸಕ ಜಿ.ಜನಾರ್ದನರೆಡ್ಡಿ ಮನೆಯ ಮೇಲೆ ದಾಳಿ ಬಗ್ಗೆ ನಿರಂತರವಾಗಿ ಹೋರಾಟ ಮಾಡಲಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿಂದಲೂ ನಿರಂತರವಾಗಿ ಅತ್ಯಾಚಾರ, ಕೊಲೆ, ದರೋಡೆ, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬುದಾಗಿ ಆರೋಪಿಸಿದರು. ರಾಜ್ಯದ ಅಬಕಾರಿ ಇಲಾಖೆಯ ಭ್ರಷ್ಟಚಾರ ಗಮನಿಸಿದರೆ ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ ಮೀರಿಸುವಂತೆಯಿದೆ ಎಂದು ಟೀಕಿಸಿದರು.