ಕಂಪ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ನೋಂದಣಿ ಸಂಖ್ಯೆ ಬರೆಯುತ್ತಿರುವುದು.  
ಬಳ್ಳಾರಿ

ಪ್ರಶ್ನೆಪತ್ರಿಕೆ ಬಳಿಕೆ ಉತ್ತರ ಪತ್ರಿಕೆ ವಿತರಣೆ

ಅಶೋಕ್ ಕುಮಾರ್ ಎನ್
ಕಂಪ್ಲಿ: ಪಟ್ಟಣದ ನಾಲ್ಕು ಸೇರಿದಂತೆ ತಾಲೂಕಿನ ಆರು ಕೇಂದ್ರಗಳಲ್ಲಿ ಮಾ.18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, 2110 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.
ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಕೇಂದ್ರದಲ್ಲಿ 293, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 333, ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆಯಲ್ಲಿ 400, ವಿಜಯನಗರ ಪ್ರೌಢಶಾಲೆಯಲ್ಲಿ 391, ಎಮ್ಮಿಗನೂರಿನ ಕೆಪಿಎಸ್ ಶಾಲೆಯಲ್ಲಿ 285, ಸುಗ್ಗೇನಹಳ್ಳಿ ಗ್ರಾಮದ ವಿದ್ಯಾಭಾರತಿ ಶಾಲೆಯಲ್ಲಿ 408 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 10 ಜನ ಅಂಗವಿಕಲರು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ಪರೀಕ್ಷೆಯಲ್ಲಿ ಮೊದಲಿಗೆ ಪ್ರಶ್ನೆ ಪತ್ರಿಕೆ ನೀಡಿ ನಂತರ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಬೆಳಿಗ್ಗೆ 9.45ಕ್ಕೆ ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳು ಆಗಮಿಸಲಿದ್ದು, 9.55ಕ್ಕೆ ಕೊಠಡಿ ಮೇಲ್ವಿಚಾರಕರಿಗೆ ಪ್ರಶ್ನೆ ಪತ್ರಿಕೆ ದೊರಕಲಿದೆ. 10 ಗಂಟೆಗೆ ಪ್ರಶ್ನೆ ಪತ್ರಿಕೆ ವಿತರಣೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಓದಿಕೊಳ್ಳಲು 10ನಿಮಿಷ ಅವಕಾಶ ಇದ್ದು, 10.10ಕ್ಕೆ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಪಡೆದುಕೊಳ್ಳಲಿದ್ದಾರೆ.