ಕಂಪ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾ ಮಠದಲ್ಲಿ ರಾಯರ ಬೃಂದಾವನವನ್ನು ಪುಷ್ಪಮಾಲೆ, ಬೆಳ್ಳಿ ಕವಚದಿಂದ ಅಲಂಕರಿಸಲಾಗಿತ್ತು.
ಕಂಪ್ಲಿ: ಪಟ್ಟಣದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಶಾಖಾಮಠದಲ್ಲಿ ಏಳನೇ ವಾರ್ಷಿಕೋತ್ಸವ ನಿಮಿತ್ತ ನಾನಾ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನಡೆದವು.
ಅರ್ಚಕ ವಿಜಯೇಂದ್ರಾಚಾರ್ ಪೌರೋಹಿತ್ಯದಲ್ಲಿ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಪುಷ್ಪಾಲಂಕಾರ, ಪ್ರಾಂಗಣದಲ್ಲಿ ರಥೋತ್ಸವ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು. ಬೆಂಗಳೂರಿನ ಪ್ರವಚನಕಾರ ಪಂಡಿತ ಪರಿಪೂರ್ಣಾಚಾರ್ ಅವರಿಂದ ಗುರು ಶ್ರೀಶ ವಿಠ್ಠಲರ ವಾಣಿಯಲ್ಲಿ ‘ಶ್ರೀ ರಾಘವೇಂದ್ರರು’ ಕುರಿತು ಉಪನ್ಯಾಸ ನೀಡಿದರು. ರಾಯನ ಭಜನೆ ಕಾರ್ಯಕ್ರಮ ನಡೆಯಿತು. ರಾಯರ ಬೃಂದಾವನವನ್ನು ಪುಷ್ಪಮಾಲೆ, ರಜತ ಕವಚಗಳಿಂದ ಅಲಂಕರಿಸಲಾಗಿತ್ತು.
ಮಠದ ವ್ಯವಸ್ಥಾಪಕ ಪುರುಷೋತ್ತಮಾಚಾರ್, ವಿಚಾರಣಾಕರ್ತ ಟಿ.ಕೊಟ್ರೇಶ್, ಭಕ್ತರಾದ ವ್ಯಾಸಾಚಾರ್, ದಿಗ್ಗಾವಿ ವೇಣುಗೋಪಾಲಚಾರ್, ರಾಯ್ಕರ್ ಜಗದೀಶ್, ಗೌಡ್ರು ಗೋಪಾಲಕೃಷ್ಣ, ರಮೇಶ ಬಬಲೇಶ್ವರ ಇತರರಿದ್ದರು.