ಸಂಡೂರು ತಾಲೂಕು ಕುರೇಕುಪ್ಪ ಪುರಸಭೆಯಲ್ಲಿ ಮಾತಂಗ ಸೇವಾ ಟ್ರಸ್ಟ್ ಉದ್ಘಾಟನೆ ಪ್ರಯುಕ್ತ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಜೀವನ ಚರಿತ್ರೆ ಸಂಪುಟದ 22 ಪುಸ್ತಕಗಳನ್ನು ಪುರಸಭೆಯ ಸಾರ್ವಜನಿಕ ಗ್ರಂಥಾಲಯಕ್ಕೆ ವಿತರಿಸಲಾಯಿತು. 
ಬಳ್ಳಾರಿ

ಅಂಬೇಡ್ಕರ್ ಸಮಗ್ರ ಬರಹ ಎಲ್ಲರೂ ಓದಿ

ಅಶೋಕ್ ಕುಮಾರ್ ಎನ್
ಸಂಡೂರು: ಡಾ.ಬಿ.ಆರ್.ಅಂಬೇಡ್ಕರ್ ಎಲ್ಲ ಜಾತಿ, ಧರ್ಮಗಳಿಗೆ ಮೀಸಲಾತಿ ಕಲ್ಪಿಸಿದ್ದಾರೆ ಎಂದು ಪುರಸಭೆ ಸದಸ್ಯ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಸೋಮಪ್ಪ ಹೇಳಿದರು.
ಕುರೇಕುಪ್ಪ ಪುರಸಭೆಯಲ್ಲಿ ಮಾತಂಗ ಸೇವಾ ಟ್ರಸ್ಟ್ ಉದ್ಘಾಟನೆ ಪ್ರಯುಕ್ತ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಜೀವನ ಚರಿತ್ರೆ ಸಂಪುಟದ 22 ಪುಸ್ತಕಗಳನ್ನು ಪುರಸಭೆ ಸಾರ್ವಜನಿಕ ಗ್ರಂಥಾಲಯಕ್ಕೆ ವಿತರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಅಂಬೇಡ್ಕರ್‌ಅವರ ಸಮಗ್ರ ಬರಹಗಳನ್ನು ಎಲ್ಲರೂ ಒದಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಸೂರಿನಾರಾಯಣ, ಉಪಾಧ್ಯಕ್ಷೆ ರೇಖಾ ಮಂಜುನಾಥ, ಸದಸ್ಯರಾದ ಲಕ್ಷ್ಮೀ ವಸಿಗೇರಪ್ಪ, ಕೊಮಾರಪ್ಪ, ನಾಮ ನಿರ್ದೇಶಿತ ಸದಸ್ಯರಾದ ತಿಮ್ಮಪ್ಪ, ಎಚ್.ಉಮಾಪತಿ, ಪ್ರಮುಖರಾದ ಮದಗಪ್ಪ, ಎಚ್.ಈರಣ್ಣ, ಮಲ್ಲಿಕಾರ್ಜುನ, ಶಂಕರ್, ಮಲಿಯಪ್ಪ, ಟ್ರಸ್ಟ್ ಅಧ್ಯಕ್ಷ ಮಾರೇಶ್, ಉಪಾಧ್ಯಕ್ಷ ಪರುಷ, ರಾಮಾಂಜಿನಿ, ಕಾರ್ಯದರ್ಶಿ ಪಂಪಾಪತಿ, ಖಜಾಂಚಿ ಹನುಮಂತ, ತಾಯಪ್ಪ, ಶಂಕರ್, ಕುಮಾರಸ್ವಾಮಿ, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಇದ್ದರು.