ಹೂವಿನಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಧ್ವಜಾರೋಹಣ ನೆರವೇರಿಸಿದರು. ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಇಒ ಜಿ.ಪರಮೇಶ್ವರ ಇತರರಿದ್ದರು.
- ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿಕೆ
- 80ನೇ ಸ್ವಾತಂತ್ರ್ಯೋತ್ಸವ
ಹೂವಿನಹಡಗಲಿ: ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಚಳವಳಿ, ಸತ್ಯಾಗ್ರಹ ನಡೆಸಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರನ್ನು ನಿತ್ಯ ಪೂಜಿಸಬೇಕು ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿದರು.
ತಾಲೂಕು ಆಡಳಿತದಿಂದ ಶನಿವಾರ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಾಪಾರಕ್ಕಾಗಿ ಬಂದವರು ದೇಶದ ಅಸಮರ್ಥತೆ ಮತ್ತು ಅರಾಜಕತೆಯ ಲಾಭ ಪಡೆದು ಆಡಳಿತ ನಡೆಸಿ ಅದೀನದಲ್ಲಿದ್ದ ಪ್ರದೇಶಗಳನ್ನು ಸ್ವಾತಂತ್ರ್ಯ ಗೊಳಿಸಲು ಸಾಕಷ್ಟು ಹೋರಾಟಗಳು ನಡೆದಿವೆ.
ಆದರೆ, ಇಂದು ಸ್ವೇಚಾಚಾರವಾಗಿ ನಮ್ಮ ಕಾಯ್ದೆಗಳ ಉಲ್ಲಂಘನೆ ನಡೆಯುತ್ತಿದೆ ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಇಒ ಜಿ.ಪರಮೇಶ್ವರ, ಸಿಪಿಐ ಮಲ್ಲಪ್ಪ ಎಸ್.ಹೂಗಾರ, ಬಿಇಒ ಕೆ.ಮಂಗಳಾ, ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಇತರರಿದ್ದರು.
ತಡವಾದ ಧ್ವಜಾರೋಹಣ: ಕಾರ್ಯಕ್ರಮಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಬರದ ಕಾರಣ ಧ್ವಜಾರೋಹಣ 30 ನಿಮಿಷ ತಡವಾಗಿ ನೆರವೇರಿತು.