ಪ್ರಮುಖ ಮುಖ್ಯಾಂಶಗಳು
ಹೂವಿನಹಡಗಲಿ: ತಾಲೂಕಿನ ಇಟ್ಟಿಗಿ ಠಾಣೆಯ ಪೊಲೀಸ್ ಅಧಿಕಾರಿಗಳು ಆಸರೆ ಯೋಜನೆಯಡಿ ಹಿರಿಯ ನಾಗರಿಕರು ಹಾಗೂ ಒಂಟಿ ಮಹಿಳೆಯರ ಮನೆಗಳಿಗೆ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿದರು.
ಹಿರಿಯ ನಾಗರಿಕರು ಎದುರಿಸುತ್ತಿರುವ ಆರೋಗ್ಯ ಹಾಗೂ ಆಹಾರ ಸಮಸ್ಯೆ ತಿಳಿದ ಠಾಣೆಯ ಪಿಎಸ್‌ಐ ಜೆ.ಕೆ.ಅಬ್ಬಾಸ್ ಅವರು ಸ್ವಂತ ಹಣದಲ್ಲಿ ಠಾಣಾ ವ್ಯಾಪ್ತಿಯ ಸೊನ್ನ, ಮೋರಿಗೆರೆ, ಸೋಗಿ ಹಾಗೂ ಸೋಗಿ ತಾಂಡಾಗಳ ವೃದ್ಧರಿಗೆ ಆಹಾರದ ಕಿಟ್ ವಿತರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ನಂತರ ಮಾತನಾಡಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಸಾರ್ವಜನಿಕರ ಸೇವೆಗೆ ಸದಾ ಸಿದ್ಧರಿದ್ದು, ತುರ್ತು ಪರಿಸ್ಥಿತಿ ಹಾಗೂ ಇತರ ಸಂಕಷ್ಟದ ಸಂದರ್ಭದಲ್ಲಿ ಹತ್ತಿರ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಂದರು. ಸಿಬ್ಬಂದಿ ಸಂಗಜ್ಜ, ಸುರೇಶ್‌ನಾಯ್ಕ, ಸತೀಶ್ ನಾಯ್ಕ ಇತರರಿದ್ದರು.