ವೀರೇಶ್ ದೊಡ್ಡಮನಿ 
ಬಳ್ಳಾರಿ

ಸಿರಗುಪ್ಪ ನಗರಸಭೆಯಲ್ಲಿ ಭ್ರಷ್ಟಾಚಾರ

ಪ್ರಮುಖ ಮುಖ್ಯಾಂಶಗಳು

  • ಭ್ರಷ್ಟಾಚಾರ
ಬಳ್ಳಾರಿ : ಸಿರಗುಪ್ಪ ಪಟ್ಟಣದಲ್ಲಿ ಸರ್ವೇ ನಂ 437 ಬಿ2 ನ 3.05 ಎಕರೆಯಲ್ಲಿ ಸರ್ಕಾರಿ ಜಿಲ್ಲಾ ಬೋರ್ಡ್ ಪ್ರೆಸಿಡೆಂಟ್ (ಜಿಪಂ) ಉದ್ಯಾನವನಕ್ಕಾಗಿ ಕಾಯ್ದಿರಿಸಿದ್ದ ಸ್ಥಳಕ್ಕೆ ನಗರಸಭೆಯಿಂದ ಕಾನೂನು ಬಾಹಿರವಾಗಿ ನಮೂನೆ -3ಬಿ ಖಾತಾ ನೀಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೀರೇಶ್ ದೊಡ್ಡಮನಿ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದಲ್ಲದೇ, ಸವೇ ನಂ. 337ಎ 1.41 ಎಕರೆ ಜಮೀನು ಹಾಗೂ ಸರ್ವೇ ನಂ. 345ಬಿ/1 ನ 2.82 ಎಕರೆ ಸರ್ಕಾರಿ ಹಳ್ಳ ಪರಂಬೋಕು ಜಮೀನುಗಳಿಗೆ ಕಾನೂನು ಬಾಹಿರವಾಗಿ ನಗರಸಭೆಯಿಂದ ನಮೂನೆ -3 ಬಿ ಖಾತಾ ಕೊಟ್ಟಿದ್ದಾರೆ. ಸವೇ ನಂ.437 ಸ್ಥಳದಲ್ಲಿ ಅನಧಿಕೃತವಾಗಿ ಕೆಲ ಶ್ರೀಮಂತ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಈವರೆಗೆ ಸ್ಥಳದಲ್ಲಿ ವಾಸಿಸುವವರೆಗೆ ಯಾವುದೇ ಹಕ್ಕು ಪತ್ರ ನೀಡಿರುವುದಿಲ್ಲ ಎಂದರು.
ಪಟ್ಟಣದ 21ನೇ ವಾರ್ಡ್‌ನಲ್ಲಿ ಸವೇ ನಂ 332ಬಿ/5, 325/ಡಿ/2, 331ಎ/1, 332ಎ/5 ಸ್ಥಳದಲ್ಲಿ ಈಗಾಗಲೇ ನಿರ್ಮಿಸಿರುವ ನೆಲಮಹಡಿ ಹಾಗೂ ಮೊದಲನೇ ವಾಣಿಜ್ಯ ಮಳಿಗೆ ಕಟ್ಟಡಕ್ಕೆ ಕಾನೂನು ಬಾಹಿರವಾಗಿ ಹೊಸದಾಗಿ ಕಟ್ಟಡ ಪರವಾನಿಗೆ ಕೊಟ್ಟಿರುವುದನ್ನು ರದ್ದುಪಡಿಸಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೊಡದೇ ಲಂಚದ ಅಮಿಷ ತೋರಿಸಿ ಕಾನೂನು ಬಾಹಿರವಾಗಿ ವಾಣಿಜ್ಯ ಮಳಿಗೆ ಕಟ್ಟಡ ಪರವಾನಿಗೆ ಪಡೆದಿರುವ ಭೂ ಮಾಲೀಕ ವಿ.ಕುಮಾರಸ್ವಾಮಿ ಎಂಬುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು. ಆರೋಪಿಸಿರುವ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆಗೊಳಿಸಿದರು.
11 ಎರ‌್ರಿಸ್ವಾಮಿ 02
ವೀರೇಶ್ ದೊಡ್ಡಮನಿ
====