ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ವಿವಿ ಪ್ರೊ.ರಾಬರ್ಟ್ ಜೋಸ್ ಉದ್ಘಾಟಿಸಿದರು. ಪ್ರೊ.ಅರುಣ್‌ಕುಮಾರ ಲಗಶೆಟ್ಟಿ, ಪ್ರೊ.ಗೌರಿ ಮಾಣಿಕ್ ಮಾನಸ, ಪ್ರೊ ಮೇಧಾವಿನಿ ಕಟ್ಟಿ , ಪ್ರೊ. ಉದಯಕುಮಾರ್ ಖಡ್ಕೆ ಇದ್ದರು. 
ಬಳ್ಳಾರಿ

ಎಐಯಿಂದ ಮಾನವನಿಗೆ ತೊಂದರೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ತಂತ್ರಜ್ಞಾನ
ಬಳ್ಳಾರಿ : ಎಐ ತಂತ್ರಜ್ಞಾನದ ಮೂಲಕ ಅನೇಕ ತೊಂದರೆ ಅನುಭವಿಸುವ ಪರಿಸ್ಥಿತಿ ಮಾನವನಿಗೆ ಎದುರಾಗಿದೆ ಎಂದು ವಿವಿ ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ರಾಬರ್ಟ್ ಜೋಸ್ ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ಅಂತರಿಕ ದೂರು ಸಮಿತಿ (ಐಸಿಸಿ) ಯಿಂದ ಗುರುವಾರ ಆಯೋಜಿಸಿದ್ದ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸ್ತಿಥ ಸಮಾನತೆಯಿಂದ ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತವಾಗಿ ಪುರುಷ ಕ್ರಾಂತಿ ಆಗಬೇಕಿದೆ ಎಂದರು.
ಪ್ರೊ.ಅರುಣ್‌ಕುಮಾರ ಲಗಶೆಟ್ಟಿ ಮಾತನಾಡಿ, ದೇಶದಲ್ಲಿ ಮಹಿಳಾ ಕಾನೂನುಗಳು ಬಲಿಷ್ಠವಾಗಿದ್ದು, ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳುವ ಅಗತ್ಯತೆಯಿದೆ ಎಂದು ಹೇಳಿದರು. ಬಳಿಕ ವಿದ್ಯಾರ್ಥಿಗಳಿಂದ ಸೈಬರ್ ಭದ್ರತಾ ವ್ಯವಸ್ಥೆಗಳು ಸೇವಾ ಸ್ಥಳದಲ್ಲಿ ಪೋಶ್ ಕಾಯ್ದೆಯ ಅನುಷ್ಠಾನ ಮತ್ತು ಬಲಪಡಿಸುವಿಕೆಯಲ್ಲಿ ಪರಿಣಾಮಕಾರಿಯಾಗಿವೆಯೆ ಎಂಬ ವಿಷಯದ ಕುರಿತು ಚರ್ಚಾಸ್ಪರ್ಧೆ ಜರುಗಿತು.