ನಕಲಿ ವಿಮೆ ನೀಡುತ್ತಿದ್ದ ಏಜೆಂಟ್ ಬಂಧನ 
ಬಳ್ಳಾರಿ

ನಕಲಿ ವಿಮೆ ನೀಡುತ್ತಿದ್ದ ಏಜೆಂಟ್ ಬಂಧನ

ಪ್ರಮುಖ ಮುಖ್ಯಾಂಶಗಳು

  • ಬಂಧನ
ಬಳ್ಳಾರಿ : ನ್ಯೂ ಇಂಡಿಯಾ ಅಸ್ಸುರೆನ್ಸ್ ವಿಮಾ ಕಂಪನಿಯ ಹೆಸರಿನಲ್ಲಿ ಸಾರ್ವಜನಿಕರಿಗೆ ನಕಲಿ ವಿಮೆ ಪಾಲಿಸಿ ನೀಡಿ ವಂಚಿಸುತ್ತಿದ್ದ ಏಜೆಂಟ್‌ ನನ್ನು ಬಂಧಿಸಿ ನ್ಯಾಯಾಂಗ ಕಳುಹಿಸಲಾಗಿದೆ.
ಹೊಸಪೇಟೆ ನಿವಾಸಿ ಷಣ್ಮುಖಪ್ಪ ಅಣ್ಣಿ ಆರೋಪಿ. ಇಲ್ಲಿನ ಈಡಿಗ ವಸತಿ ನಿಲಯದ ಬಳಿಯಿರುವ ನ್ಯೂ ಇಂಡಿಯಾ ಅಸ್ಸುರೆನ್ಸ್ ವಿಮಾ ಕಂಪನಿಯ ಕಚೇರಿಯಲ್ಲಿ ಕಳೆದ ಏಳು ವರ್ಷಗಳಿಂದ ಏಜೆಂಟ್‌ಯಾಗಿ ಕೆಲಸ ಮಾಡುತ್ತಿದ್ದ. ಈತ ವರ್ಷಗಳ ಹಿಂದೆಯೇ ಕಂಪನಿಯಿಂದ ಕೆಲಸ ಬಿಟ್ಟಿದ್ದರೂ ಸಹ, 2024ರ ಸೆಪ್ಟೆಂಬರ್‌ನಿಂದ 2025ರ ಅಕ್ಟೋಬರ್‌ವರೆಗೆ ನ್ಯೂ ಇಂಡಿಯಾ ಅಸ್ಸುರೆನ್ಸ್ ಕಂಪನಿಯ ಹೆಸರಿನಲ್ಲಿ ಮೋಟಾರು ಸೈಕಲ್ ಹಾಗೂ ಜಾನುವಾರು ಇನ್ಸುರೆನ್ಸ್ ಪಾಲಿಸಿ ಮಾಡಿಸಿಕೊಡುವುದಾಗಿ ಜನರಿಂದ ಹಣ ಪಡೆದಿದ್ದಾನೆ. ಅಸಲಿ ಪಾಲಿಸಿಗಳಂತೆಯೇ ಕಾಣುವ ನಕಲಿ ಪಾಲಿಸಿಗಳನ್ನು ಸೃಷ್ಟಿಸಿ ಜನರಿಗೆ ನೀಡಿ ನಂಬಿಸಿದ್ದಾನೆ. ಇದರಿಂದ ಸಾರ್ವಜನಿಕರಿಗೆ ಹಣಕಾಸಿನ ನಷ್ಟ ಉಂಟುಮಾಡುವುದಲ್ಲದೆ, ಕಂಪನಿಯ ಘನತೆಗೂ ಧಕ್ಕೆ ತಂದಿದ್ದಾನೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಷಣ್ಮುಖಪ್ಪ, ತನ್ನ ವಾಸಸ್ಥಳದ ಬಗ್ಗೆ ತಪ್ಪು ಮಾಹಿತಿ ನೀಡಿ ಪರಾರಿಯಾಗಿದ್ದ. ಆರೋಪಿ ವಿರುದ್ಧ ಕಂಪನಿಯ ಬ್ಯಾಂಚ್ ಮ್ಯಾನೇಜರ್ ವೆಂಕಟೇಶ್ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.