ಕಂಪ್ಲಿಯ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸಂತ ಸೇವಾಲಾಲ್ ಜಯಂತ್ಯುತ್ಸವ ಆಚರಿಸಲಾಯಿತು.  
ಬಳ್ಳಾರಿ

ದುಶ್ಚಟಗಳಿಂದ ದೂರವಿರುವಂತೆ ಸಲಹೆ

ಕಂಪ್ಲಿ: ಸಂತ ಸೇವಾಲಾಲ್ ಅವರ ಜೀವನದ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕೆಂದು ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣನಾಯ್ಕ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಸಂತ ಸೇವಾಲಾಲ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಬಂಜಾರ ಅಲೆಮಾರಿ ಸಮುದಾಯದ ಜನರನ್ನು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ ಜಾಗೃತಗೊಳಿಸಲು ಸೇವಾಲಾಲ್ ಶ್ರಮಿಸಿದ್ದು, ಸತ್ಯವಂತರಾಗಿ, ಹಿಂಸೆ, ದುಶ್ಚಟಗಳಿಂದ ದೂರವಿರುವಂತೆ ಉಪದೇಶಿಸಿದ್ದಾರೆ. ಎಂದರು.
ಅರಳಿಹಳ್ಳಿ ತಾಂಡಾದ ಸಂತ ಸೇವಾಲಾಲ್ ಟ್ರಸ್ಟ್ ಅಧ್ಯಕ್ಷ ಆರ್.ಕೆ.ಗವಿಸಿದ್ಧಪ್ಪ ಮಾತನಾಡಿ, ಪಟ್ಟಣದಲ್ಲಿ ಸೇವಾಲಾಲ್ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು. ಪಟ್ಟಣದ ರಸ್ತೆ, ವೃತ್ತಕ್ಕೆ ಸಂತ ಸೇವಾಲಾಲ್ ಹೆಸರಿಡುವಲ್ಲಿ ಪುರಸಭಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಂದಾಯ ಅಧಿಕಾರಿ ವೈ.ಎಂ.ಜಗದೀಶ, ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿ ಗುಂಡಾನಾಯ್ಕ, ಬಂಜಾರ ಸಮುದಾಯದ ಪ್ರಮುಖರಾದ ನಾಗಪ್ಪ, ಬಸವರಾಜ ಪವಾರ್, ಪುಂಡಲೀಕಪ್ಪ ರಾಠೋಡ್, ಲಿಂಬಪ್ಪ ರಾಠೋಡ್, ಹನುಮಂತಪ್ಪ ಚವ್ಹಾಣ್, ಗುಂಡನಾಯ್ಕ ಚವ್ಹಾಣ್, ಗಂಗಾಧರ ಚವ್ಹಾಣ್, ರವಿ, ಕಾಳಪ್ಪ, ರಾಜು ನಾಯ್ಕ, ನೀಲಮ್ಮ ಚವ್ಹಾಣ್,ಯಮುನಮ್ಮ ಜಾಧವ್, ಭೀಮಮ್ಮ ರಾಠೋಡ್ ಇತರರಿದ್ದರು.