ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಜೂಗಲ ಮಂಜುನಾಯಕ, ಶಿರಸ್ತೇದಾರರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ, ಸಿಬ್ಬಂದಿ ಮಾಲತೇಶ ದೇಶಪಾಂಡೆ, ಲಕ್ಷ್ಮಣನಾಯ್ಕ, ಎಚ್.ವಿ.ಮಂಜುನಾಥ, ಜಿಲಾನ್ ಇದ್ದರು.
ತಹಸೀಲ್ದಾರ್ ಜೂಗಲ ಮಂಜುನಾಯಕ ಅನಿಸಿಕೆ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಉದ್ಘಾಟನೆ
ಕಂಪ್ಲಿ: ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯಸ್ವಾಮಿಯ ಆದರ್ಶ ಗಳನ್ನು ಅರಿತು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಇಲ್ಲಿನ ತಹಸಿಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಗ್ನಿ ಬನ್ನಿರಾಯಸ್ವಾಮಿ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಅಗ್ನಿ ಬನ್ನಿರಾಯ ಸ್ವಾಮಿಯ ಶ್ರಮಜೀವಿಗಳ ಆರಾಧ್ಯ ದೈವನೆಂದು ಸ್ಮರಿಸಲಾಗುತ್ತದೆ. ಉನ್ನತ ಶಿಕ್ಷಣ, ಉನ್ನತ ಹುದ್ದೆಗಳಿಕೆ ಯಿಂದ ಪ್ರಗತಿ ಸಾಧಿಸಲು ಸಾಧ್ಯ. ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ ಕೊಡಬೇಕಿದೆ ಎಂದರು.
ಡಿಟಿ ಬಿ.ರವೀಂದ್ರಕುಮಾರ, ಶಿರಸ್ತೇದಾರ್‌ರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ, ಲಕ್ಷ್ಮಣನಾಯ್ಕ, ಎಚ್.ವಿ.ಮಂಜುನಾಥ, ಜಿಲಾನ್, ಮಾಲತೇಶ ದೇಶಪಾಂಡೆ, ಮನೋಜ, ರಮೇಶ, ಕಾಂತರಾಜ, ವನಿತಾಕುಮಾರಿ, ನೀಲಕಂಠ ಇತರರಿದ್ದರು.