ಬಳ್ಳಾರಿಯ ಶ್ರೀಮೇಧಾ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು. ಶಿಕ್ಷಕ ಎಚ್. ಏಸಯ್ಯ, ಪ್ರಾಂಶುಪಾಲ ಡಾ.ರಾಮ್ ಕಿರಣ್, ಮೇರಾ ಯುವ ಭಾರತ್ ಕೇಂದ್ರದ ಅಧಿಕಾರಿ ಅಮರೇಶ್ವರ, ಚಿಗುರು ಕಲಾತಂಡದ ಅಧ್ಯಕ್ಷ ಎಸ್.ಎಂ.ಹುಲುಗಪ್ಪ ಇದ್ದರು.
ಬಳ್ಳಾರಿ : ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಂಡಿಹಟ್ಟಿ ಪ್ರೌಢಶಾಲೆಯ ಶಿಕ್ಷಕ ಎಚ್.ಏಸಯ್ಯ ಹೇಳಿದರು.
ನಗರದ ಶ್ರೀಮೇಧಾ ಕಾಲೇಜಿನಲ್ಲಿ ಮೈ ಭಾರತ್ ಹಾಗೂ ಚಿಗುರು ಕಲಾತಂಡದ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಮೂಲಕ ಪ್ರತಿಯೊಬ್ಬ ಮಾನವನು ಸಮಾನವಾಗಿ ಬಾಳುವ ಹಕ್ಕು ನೀಡಿದ್ದಾರೆ. ನಾವೆಲ್ಲರೂ ಪರಸ್ಪರ ಪ್ರೀತಿ ಮತ್ತು ಮಾನವೀಯತೆಯಿಂದ ಬದುಕಬೇಕು. ಮಹನೀಯರ ಆದರ್ಶ ಪಾಲಿಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.