ನಕಲಿ ಚಿನ್ನ ನೀಡಿ ವಂಚನೆ ಆರೋಪ 
ಬಳ್ಳಾರಿ

ನಕಲಿ ಚಿನ್ನ ನೀಡಿ ವಂಚನೆ ಆರೋಪ

ಪ್ರಮುಖ ಮುಖ್ಯಾಂಶಗಳು

  • ನಕಲಿ
ಬಳ್ಳಾರಿ : ತೆಲಂಗಾಣದ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನದ ನಾಣ್ಯಗಳು ನೀಡಿ ಏಳು ಲಕ್ಷ ರೂ. ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶ್ರೀಕಾಂತ್ ತೋಕಾಲ ವಂಚನೆಗೆ ಒಳಗಾದವ. ರಮೇಶ ವಂಚಿಸಿದ ಆರೋಪಿ. ರಮೇಶ್ ಆರಂಭದಲ್ಲಿ ಅಸಲಿ ಚಿನ್ನದ ನಾಣ್ಯ ನೀಡಿ ನಂಬಿಸಿದ್ದ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರ್ಧ ಕೆ.ಜಿ. ಚಿನ್ನದ ನಾಣ್ಯಗಳನ್ನು ಕೊಟ್ಟು ಏಳು ಲಕ್ಷ ರೂ. ಪಡೆದಿದ್ದಾರೆ ಎಂದು ಶ್ರೀಕಾಂತ್ ತೋಕಾಲ ಅವರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
=====