ಸಣಾಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಖಂಡ ಭಜನೆ ನಡೆಯಿತು.
ಕಂಪ್ಲಿ: ಸಮೃದ್ಧ ಮಳೆ ಹಾಗೂ ಬೆಳೆಗಾಗಿ ಪ್ರಾರ್ಥಿಸಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಅರ್ಚಕರಾದ ಕೆ.ಎಂ.ಚಂದ್ರಶೇಖರ, ಕೆ.ಸಿ.ಸಿದ್ಧರಾಮಯ್ಯಶಾಸ್ತ್ರಿ ಪೌರೋಹಿತ್ಯದಲ್ಲಿ ನೂರೆಂಟು ಜಲ ಕುಂಭಾಭಿಷೇಕ, ಸಹಸ್ರ ನಾಮಾವಳಿ, ಮಹಾಮಂಗಳಾರತಿಯೊಂದಿಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಲೋಕ ಕಲ್ಯಾಣ, ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಸಣಾಪುರದ ಶ್ರೀ ಉದ್ಭವ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಅಖಂಡ ಭಜನೆ ಸೋಮವಾರ ಮಂಗಳಗೊಂಡಿತು. ಸಣಾಪುರದ ಮಹಿಳಾ ಭಜನಾ ತಂಡ ಅಖಂಡ ಭಜನೆಯಲ್ಲಿ ಪಾಲ್ಗೊಂಡಿತ್ತು. ಸಣಾಪುರ, ಮುಷ್ಟೂರು, ಗುತ್ತಿಗೆನೂರು ಗ್ರಾಮಗಳ ಭಜನಾ ತಂಡಗಳು ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆತನಕ ಅಖಂಡ ಭಜನೆ ನಡೆಸಿಕೊಟ್ಟರು.
ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ ಪೌರೋಹಿತ್ಯದಲ್ಲಿ 11 ವಟುಗಳಿಂದ ಏಕದಶ ರುದ್ರಾಭಿಷೇಕ, ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನೆರವೇರಿದವು.