ಕಂಪ್ಲಿಯಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಮಹಿಳಾ ನೌಕರರನ್ನು ಗೌರವಿಸಲಾಯಿತು. 
ಬಳ್ಳಾರಿ

ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಸಾಮರ್ಥ್ಯ

ಅಶೋಕ್ ಕುಮಾರ್ ಎನ್
ಕಂಪ್ಲಿ: ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಭಾನುವಾರ ಆಚರಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಸಮಾರಂಭಕ್ಕೆ ಚಾಲನೆ ನೀಡಿ, ಮಹಿಳೆಯರು ನಿವೃತ್ತಿ ನಂತರ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಕುಟುಂಬದ ಸದಸ್ಯರೊಡನೆ ಸಾಮರಸ್ಯದಿಂದ ಇರಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ವಿ.ಪಕ್ಕೀರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಎಚ್.ಹೊನ್ನೂರಮ್ಮ, ಜಿ.ಕಮಲಮ್ಮ, ಬಿ.ವೀರಣ್ಣ, ಸಿ.ಚನ್ನಬಸಪ್ಪ, ವಿ.ನಾರಾಯಣರೆಡ್ಡಿ, ಬಿ.ವೀರೇಶಪ್ಪ, ಜಿ.ಗುರುಮೂರ್ತಿ, ವಿ.ರಾಜೇಶ್ವರಿ, ಜಿ.ಗಂಗಾಧರಗೌಡ, ಎ.ವೆಂಕಟೇಶ, ನಾಗರಾಜ ದಬಾಡಿ, ಕೆ.ನರಸಿಂಹಲು, ಎನ್.ನಜೀರ್‌ಅಹ್ಮದ್, ಎಸ್.ವೀರಭದ್ರಪ್ಪ, ಎಂ.ನಾಗೇಶ್ವರರಾವ್, ಎಚ್.ವಸಂತರಾವ್, ಪಿ.ಸೋಮಪ್ಪ ಇತರರಿದ್ದರು.