ಕಂಪ್ಲಿಯಲ್ಲಿ ಮಹಾರ್ ವೀರಯೋಧರ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಸಮಾನಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ವಸಂತರಾಜ ಕಹಳೆ, ಕೆ.ಲಕ್ಷ್ಮಣ, ಮರಿಸ್ವಾಮಿ ಸಣಾಪುರ, ಕರಿಯಪ್ಪ ಗುಡಿಮನಿ, ಸಿ.ಬಸವರಾಜ ಇತರರಿದ್ದರು.
- ಕೋರೆಗಾಂವ್ ವಿಜಯೋತ್ಸವ
- ಅಸ್ಪಶ್ಯತೆ
ಮಾನವೀಯ ಮೌಲ್ಯ ಪ್ರತಿಪಾದಿಸುವ ಸಂಕೇತ
ಕಂಪ್ಲಿ: ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ತಾರತಮ್ಯ, ಅಸ್ಪಶ್ಯತೆಗಳ ವಿರುದ್ಧ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಸಂಕೇತವಾಗಿ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಮಾನಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಹಮ್ಮಿಕೊಂಡಿದ್ದ ಮಹಾರ್ ವೀರಯೋಧರ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 30 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ಪದಾಧಿಕಾರಿಗಳಾದ ಕೆ.ಲಕ್ಷ್ಮಣ, ಮರಿಸ್ವಾಮಿ ಸಣಾಪುರ, ಕರಿಯಪ್ಪ ಗುಡಿಮನಿ, ಸಿ.ಬಸವರಾಜ, ಕೆ.ನೀಲಪ್ಪ, ಎ.ಎಸ್.ಯಲ್ಲಪ್ಪ, ರವಿ ಮಣ್ಣೂರು, ರಘುವೀರ್, ಶಾಂತಪ್ಪ ಪೂಜಾರಿ, ಎಸ್.ಬಸವರಾಜ, ಎಚ್.ಮಂಜುನಾಥ, ಇ.ಧನಂಜಯ, ಮಲ್ಲೇಶಪ್ಪ, ಗಂಗಮ್ಮ ಇತರರಿದ್ದರು.