ಪ್ರತ್ಯೇಕ ಅಪಘಾತ ಇಬ್ಬರ ಸಾವು
- ಜೂಜಾಟ ಅಡ್ಡೆ ಮೇಲೆ ದಾಳಿ
- ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಯತ್ನಿ
ಬಳ್ಳಾರಿ : ನಗರದ ಹೊರವಲಯದಲ್ಲಿ ವ್ಯಕ್ತಿಯೊಬ್ಬ ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ರಾಜ್‌ಸಾಬ್ (68)ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎರಡನೇ ಘಟನೆಯಲ್ಲಿ ಸಿರಗುಪ್ಪ ತಾಲೂಕಿನ ವತ್ತುಮುರಣಿ ಗ್ರಾಮದಲ್ಲಿ ಡ್ರೈನೆಜ್ ವಾಲ್‌ಗೆ ಚಲಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಸವಾರನಿಗೆ ತಲೆ ಪೆಟ್ಟಾಗಿ ಪ್ರಭಾಕರ್(58)ಎಂಬಾತ ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿ 11 ಜನ ಆರೋಪಿಗಳನ್ನು ಬಂಧಿಸಿ, 11,250 ರೂ. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ನಗರದ ಸುಲೇಮಾನ್ ಬೀದಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 40 ಸಾವಿರ ರೂ. ಮೌಲ್ಯದ 1,750 ಕೆ.ಜಿ. ಪಡಿತರ ಅಕ್ಕಿ ಜಪ್ತಿಪಡಿಸಿಕೊಂಡು ಖಾಸಿಂ ಸಾಬ್ ಎಂಬ ಅರೋಪಿ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಲಾರಿ ಟರ್ಮಿನಲ್ ಬಳಿ ಎಂ.ಡಿ.ಶಾಖೀರ್‌ನ ಮೇಲೆ ನವಾಜ್ ಎಂಬ ಯುವಕ ಸ್ಕ್ರೂ ಡೈವರ್ ಹಾಗೂ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಮಹಿಳೆಯ ಮೇಲೆ ಆರೋಪಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಯತ್ನಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಸುಮನ್ ಡಿ.ಪನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.