ಎಮ್ಮಿಗನೂರಿನ ಹಂಪಿಸಾವಿರದೇವರ ಮಠದಲ್ಲಿ ಲೇಖಕಿ ಬೇರ್ಗಿ ಜಯಶ್ರೀ ಅವರ ‘ಮುಗಿಲ ನಕ್ಷತ್ರ’ ಕವನ ಸಂಕಲನವನ್ನು ಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು. ಎಚ್.ವೀರಾಪುರದ ಜಡೇಶ ತಾತ, ಪ್ರಮುಖರಾದ ಶಿವೇಗೌಡ ರಾಮಪ್ಪ, ಬೇರ್ಗಿ ಜಯಶ್ರೀ, ಮಹಾಂತೇಶ್ ಇತರರಿದ್ದರು.
ಕಂಪ್ಲಿ: ಕವಿತೆ ಮನುಷ್ಯನ ಪರಿವರ್ತನೆಗೆ ದಾರಿ ದೀಪವಾಗಿದೆ ಎಂದು ಎಮ್ಮಿಗನೂರಿನ ಹಂಪಿಸಾವಿರದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಎಮ್ಮಿಗನೂರಿನ ಹಂಪಿಸಾವಿರದೇವರ ಮಠದಲ್ಲಿ ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿನಿ ಬೇರ್ಗಿ ಜಯಶ್ರೀ ರಚಿಸಿದ ‘ಮುಗಿಲ ನಕ್ಷತ್ರ’ ಕವನ ಸಂಕಲನಬಿಡುಗಡೆಗೊಳಿಸಿ ಮಂಗಳವಾರ ಮಾತನಾಡಿದರು. ಕವಿತೆಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರೊಂದಿಗೆ ಪ್ರಸ್ತುತ ವಿದ್ಯಮಾನಗಳ ಕೈಗನ್ನಡಿಯಾಗಬೇಕಿದೆ. ವೈಯಕ್ತಿಕ, ಸಮುದಾಯ ಪರಿವರ್ತನೆ ಮತ್ತು ಪ್ರಗತಿಯಲ್ಲಿ ಕವಿತೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಲೇಖಕಿ ಬೇರ್ಗಿ ಜಯಶ್ರೀ ಮಾತನಾಡಿ, ‘ಮುಗಿಲ ನಕ್ಷತ್ರ’ ಕವನ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದಿಂದ 2025-26ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಯಾಗಿ ಆಯ್ಕೆಗೊಂಡಿದ್ದು, ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು. ಎಚ್.ವೀರಾಪುರದ ಜ್ಞಾನಜ್ಯೋತಿ ಶಿವಲಿಂಗ ಮಂದಿರದ ಜಡೇಶ ತಾತ, ಪ್ರಮುಖರಾದ ಶಿವೇಗೌಡ ರಾಮಪ್ಪ, ಚನ್ನಪಟ್ಟಣ ಬಸವನಗೌಡ, ಹನುಮನಗೌಡ, ಗಂಟೆ ಜಡೇಶ, ಹಂಪಿ ಚಂದ್ರಶೇಖರಸ್ವಾಮಿ, ಮಣಿಕಂಠ, ಜಡೇಸಿದ್ಧಸ್ವಾಮಿ, ಮಹಾಂತೇಶ, ಬಸಮ್ಮ, ಲಕ್ಷ್ಮೀ, ಮಣಿಕಂಂಠ, ವಿಥುನ್‌ಗೌಡ ಇತರರಿದ್ದರು.