ರಾಮಸಾಗರ ಆನೆ ಪ್ರಕಾಶ ಮೃತ ಎಂದು ಪಟ್ಟಿಯಲ್ಲಿ ದಾಖಲಾಗಿರುವುದು. 
ಬಳ್ಳಾರಿ

ಬದುಕಿರುವ ವ್ಯಕ್ತಿ ಮೃತ ಎಂದು ದಾಖಲು

ಪ್ರಮುಖ ಮುಖ್ಯಾಂಶಗಳು

  • ತಮ್ಮ ಅಸ್ತಿತ್ವ ಸಾಬೀತು

ಕಂಪ್ಲಿ: ರಾಮಸಾಗರದಲ್ಲಿ ಬದುಕಿರುವ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಮೃತ ಎಂದು ದಾಖಲಿಸಿರುವುದು ಬೆಳಕಿಗೆ ಬಂದಿದೆ. ಗ್ರಾಮದ 1ನೇ ವಾರ್ಡ್‌ನ ಮತದಾರರ ಪಟ್ಟಿಯ ಆನೆ ಪ್ರಕಾಶ ಎಂಬಾತನನ್ನು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮೃತಪಟ್ಟಿದ್ದಾನೆಂದು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ. ಆನೆ ಪ್ರಕಾಶ ಜೀವಂತವಾಗಿದ್ದು, ಸ್ವಂತ ನಿವಾಸದಲ್ಲಿಯೇ ವಾಸಿಸುತ್ತಿದ್ದಾರೆ. ಸ್ವತಃ ಅವರೇ ಆಧಾರ್ ಕಾರ್ಡ್ ತೋರಿಸಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ.

ಕರ್ನಾಟಕ ಜನಶಕ್ತಿ ಸಂಘಟನೆ ಮುಖಂಡ ವಸಂತರಾಜ್ ಕಹಳೆ ಮಾತನಾಡಿ, ಬದುಕಿರುವ ವ್ಯಕ್ತಿ ಮೃತಪಟ್ಟಿದ್ದಾನೆಂದು ಅನೇಕರ ಹೆಸರನ್ನು ಮತಪಟ್ಟಿಟ್ಟಿಗೆ ಸೇರಿರುವ ಸಾಧ್ಯತೆಗಳಿದ್ದು ಎಚ್ಚರವಹಿಸುವ ಅಗತ್ಯವಿದೆ ಎಂದು
ಲೋಪಗಳು ಗಮನಕ್ಕೆ ಬಂದರೆ ಸರಿಪಡಿಸುವ ಅವಕಾಶಗಳಿವೆ. ಸದ್ಯ ಆನೆ ಪ್ರಕಾಶ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಸ್ಪಷ್ಟಪಡಿಸಿದ್ದಾರೆ.