ಕಂಪ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ 193ನೇ ಮಹಾಮನೆ ಕಾರ್ಯಕ್ರಮದಲ್ಲಿ ಹೊಸ ಯಲ್ಲಾಪುರದ ಸೇವಾಕರ್ತ ಬಾಬುಸ್ವಾಮಿ ಮಾತನಾಡಿದರು. ಪ್ರಮುಖರಾದ ಜಿ.ಪ್ರಕಾಶ್, ಮಡಿವಾಳ ಹುಲುಗಪ್ಪ, ಎಲಿಗಾರ ವೆಂಕಟರೆಡ್ಡಿ ಇದ್ದರು.
- ಸೇವಾಕರ್ತ ಬಾಬುಸ್ವಾಮಿ ಅಭಿಪ್ರಾಯ
- ಮಹಾಮನೆ ಕಾರ್ಯಕ್ರಮ
ಕಂಪ್ಲಿ: ತಂದೆ-ತಾಯಿ ಬದುಕಿದ್ದಾಗಲೇ ಕಾಳಜಿಯಿಂದ ನೋಡಿಕೊಳ್ಳುವುದೇ ಶರಣ ಧರ್ಮ ಎಂದು ಹೊಸ ಯಲ್ಲಾಪುರದ ಶ್ರೀ ಗುರುಲಿಂಗೇಶ್ವರಸ್ವಾಮಿ ಮಠದ ಸೇವಾಕರ್ತ ಬಾಬುಸ್ವಾಮಿ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಗಂಗಾ ಸಂಕೀರ್ಣದಲ್ಲಿ 193ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಡೆ-ನುಡಿ ಒಂದಾಗಿಸಿಕೊಂಡಲ್ಲಿ ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯ ಎಂದರು. ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಮಡಿವಾಳ ಹುಲುಗಪ್ಪ ಮಾತನಾಡಿ, ಹೇರೂರು ವಿರುಪನಗೌಡ ತಾತನ ತತ್ವಪದಗಳು ಜೀವನ ಜಂಜಾಟದಿಂದ ಪಾರಾಗುವ ಬಗೆಯನ್ನು ಒಳಗೊಂಡಿವೆ ಎಂದು ತಿಳಿಸಿದರು.
ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಲಿಗಾರ ವೆಂಕಟರೆಡ್ಡಿ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಎಸ್. ಶಾಮಸುಂದರರಾವ್, ಕೆ.ಚಂದ್ರಶೇಖರ, ಅಶೋಕ ಕುಕನೂರು, ಅಂಬಿಗರ ಮಂಜುನಾಥ, ಪಶುಪತಿಗೌಡ, ಬಿ.ಎಂ.ರುದ್ರಯ್ಯ, ಚಂದ್ರಯ್ಯಸೊಪ್ಪಿಮಠ, ಇಟಗಿ ಜ್ಯೋತಿ, ಗುರುಬಸಮ್ಮ, ಮರಿಶೆಟ್ರು ಸುರೇಶ್, ಕೆ.ಯಂಕಾರೆಡ್ಡಿ ಇತರರಿದ್ದರು.