ಬಳ್ಳಾರಿಯ ಮೋಕಾ ಗ್ರಾಮದಲ್ಲಿ ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವು ಸಂಭ್ರಮ ಸಡಗರದಿಂದ ಜರುಗಿತು. 
ಬಳ್ಳಾರಿ

ಅದ್ಧೂರಿಯಾಗಿ ಜರುಗಿದ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ರುದ್ರಾಭಿಷೇಕ
ಬಳ್ಳಾರಿ : ತಾಲೂಕಿನ ಮೋಕಾ ಗ್ರಾಮದಲ್ಲಿ ಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವು ಸಂಭ್ರಮ ಸಡಗರದಿಂದ ಜರುಗಿತು. ಠಥೋತ್ಸವ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ ಭಕ್ತರು ಭಕ್ತಿಪರವಶರಾದರು. ದೇಗುಲದಲ್ಲಿ ಬೆಳಗ್ಗೆ ದೇವರಿಗೆ ರುದ್ರಾಭಿಷೇಕ ಮಹಾಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮ ನಡೆದವು. ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಸಂಜೆ ರಥೋತ್ಸವ ಸಂಪನ್ನಗೊಂಡಿತು.