ಗೆಣಿಕೆಹಾಳು ಸರ್ಕಾರಿ ಪೌಢಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ಆಯೋಜಿಸಿದ್ದ ಬಳ್ಳಾರಿ ಜಿಲ್ಲೆಯ ಜನಪದ ಕಲೆ ಉಪನ್ಯಾಸ ಕಾರ್ಯಕ್ರಮವನ್ನು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ.ಚಿಲ್ಕರಾಗಿ ಉದ್ಘಾಟಿಸಿದರು. ಪ್ರಾಧ್ಯಾಪಕಿ ರೇಣುಕಾ ಪೂಜಾರ್, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಡಾ. ತಿಪ್ಪೇರುದ್ರ ಸಂಡೂರು, ಮುಖ್ಯಶಿಕ್ಷಕ ಚಾಂದ್ ಬಾಷಾ ಇತರರಿದ್ದರು. 
ಬಳ್ಳಾರಿ

ಸಾಮಾಜಿಕ ಸಾಮರಸ್ಯದ ಸಂಕೇತ ಜನಪದ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕಿ ರೇಣುಕಾ ಪೂಜಾರ್ ಅಭಿಮತ
  • ಬಳ್ಳಾರಿ ಕಲೆಗಳ ತವರೂರು
ಕುರುಗೋಡು: ಜನಪದ ಸಂಸ್ಕೃತಿಯ ತಾಯಿ ಬೇರಾಗಿದ್ದು, ಬಯಲಾಟ, ತೊಗಲುಗೊಂಬೆ, ಹಗಲುವೇಷ, ಜೋಗತಿ ನೃತ್ಯ, ಚೌಡಿಕೆ ಪದ ಸೇರಿದಂತೆ ಇತರ ಜನಪದ ಕಲೆಗಳ ತವರೂರು ಬಳ್ಳಾರಿಯಾಗಿದೆ ಎಂದು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ರೇಣುಕಾ ಪೂಜಾರ್ ಅಭಿಪ್ರಾಯಪಟ್ಟರು.
ಗೆಣಿಕೆಹಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ಶುಕ್ರವಾರ ಆಯೋಜಿಸಿದ್ದ ಬಳ್ಳಾರಿ ಜಿಲ್ಲೆಯ ಜನಪದ ಕಲೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದ ಕಲೆ ಮನರಂಜನೆ ಸಾಧನವಾಗುವ ಜತೆಗೆ ಸಾಮಾಜಿಕ ಸಾಮರಸ್ಯದ ಸಂಕೇತವಾಗಿವೆ ಎಂದರು.
ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ.ಚಿಲ್ಕರಾಗಿ ಮಾತನಾಡಿ, ಸಾಹಿತ್ಯದ ಮೂಲಕ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದು ಚಕೋರ ವೇದಿಕೆಯ ಉದ್ದೇಶವಾಗಿದೆ. ಗ್ರಾಮೀಣ ಮಕ್ಕಳಿಗೆ ಸಾಹಿತ್ಯ ಅಭಿರುಚಿ ಹೆಚ್ಚಿಸಲು ಪೂರಕವಾಗಿದೆ ಎಂದರು.
ಮುಖ್ಯಶಿಕ್ಷಕ ಚಾಂದ್ ಬಾಷಾ ಮಾತನಾಡಿ, ಜನಪದ ಸಾಹಿತ್ಯ ಮಾನವೀಯ ಮೌಲ್ಯಗಳ ಗಣಿಯಾಗಿದ್ದು, ಬಿಡುವಿನ ಸಮಯದಲ್ಲಿ ಜನಪದವನ್ನು ಮನರಂಜನೆಗೆ ಬಳಸಿಕೊಳ್ಳುವ ಮೂಲಕ ವೈವಿಧ್ಯಮಯ ಕಲೆ ಹುಟ್ಟಿಕೊಂಡವು ಎಂದು ಅಭಿಪ್ರಾಯಪಟ್ಟರು. ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಡಾ. ತಿಪ್ಪೇರುದ್ರ ಸಂಡೂರು, ಎಸ್ಡಿಎಂಸಿ ಅಧ್ಯಕ್ಷ ಯು.ರುದ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಮಸೂತಿ, ಅಧ್ಯಾಪಕರಾದ ವಿಜಯಕುಮಾರಿ ಎಂ., ಪುಷ್ಪಾಂಜಲಿ, ದೊಡ್ಡನಗೌಡ, ಸುಭಾನ್ ಆಜಾದ್, ಶಮೀಮ್, ಸುಷ್ಮಾ ಇದ್ದರು.