ಸಿರಗುಪ್ಪದಲ್ಲಿ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಂದೋಲನದ ಜಾಗೃತಿಯ ಕಾರ್ಯಕ್ರಮಕ್ಕೆ ತೆಕ್ಕಲಕೋಟೆ ಪಪಂ ಸಿಬ್ಬಂದಿ ಬಹುಮಾನ ಪಡೆದರು. ತಹಸೀಲ್ದಾರ್ ಗೌಸೀಯಾ ಬೇಗಂ, ಶಾಸಕ ಬಿ.ಎಂ.ನಾಗರಾಜ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ್, ತಾಲೂಕು ಆರೋಗ್ಯಾಧಿಕಾರಿ ದಮ್ಮೂರು ಬಸವರಾಜ, ಪೌರಾಯುಕ್ತ ಗಂಗಾಧರ, ತಾಪಂ ಇ.ಒ.ಪವನ್ ಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಗುರಪ್ಪ ಇತರರಿದ್ದರು. 
ಬಳ್ಳಾರಿ

ಆತ್ಮಾವಲೋಕನ ಮಾಡಿಕೊಳ್ಳುವ ದಿನ

ಪ್ರಮುಖ ಮುಖ್ಯಾಂಶಗಳು

  • 80ನೇ ಸ್ವಾತಂತ್ರ್ಯೋತ್ಸವ
  • ತಹಸೀಲ್ದಾರ್ ಗೌಸೀಯಾ ಬೇಗಂ ಹೇಳಿಕೆ

ಸಿರಗುಪ್ಪ: ನಮ್ಮ ಪೂರ್ವಜರು ನೀಡಿರುವ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವುದು ಹಾಗೂ ಮುಂದಿನ ಪೀಳಿಗೆಗೆ ಬೆಳೆಸುವುದು ಬಗ್ಗೆ ಆಲೋಚಿಸುವುದು ಅಗತ್ಯ ಎಂದು ತಹಸೀಲ್ದಾರ್ ಗೌಸೀಯಾ ಬೇಗಂ ಹೇಳಿದರು.

ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಶನಿವಾರ ಸ್ವಾತಂತ್ರೊೃೀತ್ಸವ ಕಾರ್ಯಕ್ರದಲ್ಲಿ ಮಾತನಾಡಿದರು ಆಚರಣೆ ಕೇವಲ ಗತಕಾಲದ ಹೋರಾಟ ಹಾಗೂ ತ್ಯಾಗಗಳನ್ನು ಸ್ಮರಿಸುವ ದಿನವಲ್ಲ. ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಮತ್ತು ಆತ್ಮಾವಲೋಕನ ಮಾಡಿಕೊಳ್ಳುವ ದಿನ.
ಮೂಲಭೂತ ಹಕ್ಕುಗಳನ್ನು ಅನುಭವಿಸುತ್ತಿರುವುದು ಹೋರಾಟಗಾರರು ನೀಡಿದ ಕೊಡುಗೆ. ಶಾಸಕ ಬಿ.ಎಂ.ನಾಗರಾಜ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ್, ತಾಲೂಕು ಆರೋಗ್ಯಾಧಿಕಾರಿ ದಮ್ಮೂರು ಬಸವರಾಜ, ಪೌರಾಯುಕ್ತ ಗಂಗಾಧರ, ತಾಪಂ ಇ.ಒ.ಪವನ್ ಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಗುರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಡ್ಡೆರು ಸಿದ್ದಯ್ಯ, ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರವರ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕನಿರ್ದೇಶಕ ಮಲ್ಲಿಕಾರ್ಜುನ ಇದ್ದರು.