ಕಂಪ್ಲಿಯಲ್ಲಿ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಜನ್ಮದಿನ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಮಾತನಾಡಿದರು. ಪ್ರಮುಖರಾದ ಅಳ್ಳಳ್ಳಿ ವೀರೇಶ್, ಗೊರ್ತಿ ಶ್ರೀನಿವಾಸ್, ಟಿ.ರಬಿಯಾನಿಸಾರ್, ಸಿ.ಎ.ಚನ್ನಪ್ಪ, ಮನೋಜ್‌ಗೌಡ ಇತರರಿದ್ದರು.
- ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಅನಿಸಿಕೆ
- ಡಾ.ಶ್ಯಾಮಪ್ರಸಾದ್ ಮುಖರ್ಜಿ ಜನ್ಮದಿನ
ಕಂಪ್ಲಿ: ಭಾರತೀಯ ಪ್ರಜೆಗಳ ಹಿತಕ್ಕಾಗಿ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರು ದೇಶವನ್ನು ಕಾಪಾಡಿಕೊಳ್ಳಲು ದಿಟ್ಟ ನಿಲುವು ಹೊಂದಿದ್ದರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಹೇಳಿದರು.
ತುಂಗಭದ್ರಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪಕ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸಾಮಾನ್ಯರ ಸೇವೆಗಾಗಿ ತಮ್ಮ ಜೀವನ ಸವೆಸಿದರು. ವಸಾಹತುಶಾಹಿ, ಕೋಮುವಾದ ವಿರೋಧಿಸುವಲ್ಲಿ ಮುಂಚುಣಿಯಲ್ಲಿದ್ದರು. ಮುಖರ್ಜಿ ಅವರ ತತ್ವ, ಸಿದ್ಧಾಂತಗಳು ಇಂದಿನ ರಾಜಕಾರಣಿಗಳಿಗೆ ಅನುಕರಣೀಯ ಎಂದರು.
ಪ್ರಮುಖರಾದ ಅಳ್ಳಳ್ಳಿ ವೀರೇಶ್, ಗೊರ್ತಿ ಶ್ರೀನಿವಾಸಲು, ಟಿ.ವಿ.ಸುದರ್ಶನರೆಡ್ಡಿ, ಟಿ.ರಬಿಯಾ ನಿಸಾರ್, ಸಿ.ಎ.ಚನ್ನಪ್ಪ, ಮನೋಜ್‌ಗೌಡ, ಪ್ರಶಾಂತ, ಪಕ್ಕೀರಪ್ಪ, ಬಸವ ಪ್ರಭು, ಕಟ್ಟೆ ವಿಶ್ವನಾಥ, ಜಿ.ಶ್ರೀನಿವಾಸ್, ಪಂಪಾಪತಿ, ಎಸ್.ಆರ್.ಕಾರ್ತಿಕ್, ಭಾಸ್ಕರ, ವೈ.ಮುರುಳಿ ಮೋಹನರೆಡ್ಡಿ, ಈರಣ್ಣ, ಜಡೆಪ್ಪ, ಕಾರ್ತೀಕ್ ಇತರರಿದ್ದರು.