ಕೊಟ್ಟೂರು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಪ್ರಮುಖರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಅಮರೇಶ ಜಿ.ಕೆ., ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಾನಾಯ್ಕ, ಶಿರಸ್ತೇದಾರ್ ಚಂದ್ರನಾಯ್ಕ ಇತರರಿದ್ದರು. 
ಬಳ್ಳಾರಿ

ಬಂಜಾರ ಸಮುದಾಯದ ದಾರಿದೀಪ

ಕೊಟ್ಟೂರು: ಸಂತ ಸೇವಾಲಾಲ್ ಅವರು ಮದ್ಯ, ಗಾಂಜಾ ವ್ಯಸನಗಳಿಂದ ದೂರವಿರಬೇಕೆಂದು ಯುವಕರಲ್ಲಿ ಜಾಗೃತಿ ಮೂಡಿಸಿದರು. ಹಸಿದವರಿಗೆ ರೊಟ್ಟಿ ಕೊಡಿ, ಬಾಯಾರಿದವರಿಗೆ ನೀರುಣಿಸಿ ಎಂದು ಮಾರ್ಗದರ್ಶನ ನೀಡಿದರು ಎಂದು ತಹಸೀಲ್ದಾರ್ ಅಮರೇಶ ಜಿ.ಕೆ. ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಾನವೀಯತೆಯ ಉಪದೇಶಗಳಿಂದ ಸಂಕಷ್ಟದಲ್ಲಿದ್ದ ಬಂಜಾರ ಸಮುದಾಯಕ್ಕೆ ಸೇವಾಲಾಲ್ ಅವರು ದಾರಿ ದೀಪವಾಗಿದ್ದರು. ದೇಶದ ನಾನಾ ಕಡೆ ಸಂಚರಿಸಿ ಶಾಂತಿಮಂತ್ರ ಬೋಧಿಸಿದರು ಎಂದರು.
ಉಪನ್ಯಾಸಕ ಜ್ಯೋತಿನಾಯ್ಕೋ ಮಾತನಾಡಿ, ಸೇವಾಲಾಲ್ ಅವರ ಹುಟ್ಟು, ಜೀವನ ಚರಿತ್ರೆ ಹಾಗೂ ನಾಡಿಗೆ ನೀಡಿದ ಕೊಡುಗೆ ಬಗ್ಗೆ ತಿಳಿಸಿದರು. ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಾನಾಯ್ಕ, ರೈತ ಮುಖಂಡ ಜಯಪ್ರಕಾಶ್ ನಾಯ್ಕ ಕೆ.ಎಸ್., ದೂಪದಹಳ್ಳಿ ಹಟ್ಟಿ ನಾಯ್ಕ, ಸೋಮ್ಲನಾಯ್ಕ, ಕೊಟ್ಟೂರಿನ ದೇವೇಂದ್ರ ನಾಯ್ಕ, ತಿಮ್ಮಲಾಪುರ ತಾಂಡದ ಶೇಖರನಾಯ್ಕ, ಕೃಷ್ಣನಾಯ್ಕ, ಬಾಲಾನಾಯ್ಕ, ರಮೇಶನಾಯ್ಕ, ಶಿರಸ್ತೇದಾರ್ ಚಂದ್ರನಾಯ್ಕ, ಉಪತಹಶೀಲ್ದಾರ್ ಅನ್ನದಾನೇಶ ಬಿ ಪತ್ತಾರ್, ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಹರೀಶ್, ಭೂಮಾಪನ ಸಿಬ್ಬಂದಿ ಬಸವರಾಜ, ನಾಗರಾಜ, ಗೌರಮ್ಮ, ಸಿ ಮ ಗುರುಬಸವರಾಜ ಇತರರಿದ್ದರು.